ರಾಜೀನಾಮಗೆ ಮುಂದಾದ್ರಾ ಟಿಡಿಪಿ ಸಂಸದ ದಿವಾಕರ್ ರೆಡ್ಡಿ?

TDP MP JC Diwakar Reddy decides to Resign
Highlights

ಟಿಡಿಪಿ ಸಂಸದ ಜೆಸಿ ದೀವಾಕರ್ ರೆಡ್ಡಿ

ರಾಜೀನಾಮೆಗೆ ಮುಂದಾದ ದೀವಾಕರ್ ರೆಡ್ಡಿ

ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಬಲ ಇಲ್ಲ

ರಾಜಕೀಯ ವ್ಯವಸ್ಥೆ ಸಾಕಾಗಿದೆ ಎಂದ ರೆಡ್ಡಿ

ನವದೆಹಲಿ(ಜು.19): ಕೇಂದ್ರ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡನೆ ಮಾಡಿರುವ ಅವಿಶ್ವಾಸ ನಿರ್ಣಯ ಕುರಿತು ಇನ್ನು ಕೆಲವೇ ದಿನಗಳಲ್ಲಿ ಚರ್ಚೆ ನಡೆಯಲಿದ್ದು, ಈ ನಿರ್ಣಾಯಕ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟಿಡಿಪಿ ಸಂಸದರೊಬ್ಬರು ಗುರುವಾರ ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿ, ಟಿಡಿಪಿ ಪಕ್ಷ ಹಾಗೂ ಕೇಂದ್ರದ ನಡುವಿನ ತಿಕ್ಕಾಟಗಳಿಂದ ಸಾಕಾಗಿ ಹೋಗಿದ್ದು, ಈ ನಿರ್ಣಾಯಕ ಅಧಿವೇಶನದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 
 ಇದೇ ವೇಳೆ ಪಕ್ಷದ ವಿಪ್ ಉಲ್ಲಂಘಿಸುವುದಾಗಿ ಹೇಳಿರುವ ರೆಡ್ಡಿ, ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕೇಂದ್ರ ಹಾಗೂ ಟಿಡಿಪಿ ಸರ್ಕಾರಗಳ ಹಗ್ಗಜಗ್ಗಾಟದಿಂದ ಸಾಕಾಗಿ ಹೋಗಿದ್ದು, ರಾಜಕೀಯ ವ್ಯವಸ್ಥೆಯೇ ಬೇಡವೆನಿಸಿದೆ ಎಂದು ರೆಡ್ಡಿ ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವುದಾಗಿ ರೆಡ್ಡಿ ತಿಳಿಸಿದ್ದಾರೆ. ಸದ್ಯ ತಾವು ಅನಂತಪುರದಲ್ಲಿದ್ದು, ಇನ್ನೊಂದು ವಾರದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

loader