ತೆಲುಗು ದೇಶಂ ಪಾರ್ಟಿ ಶಾಸಕ ಜೆಸಿ ದಿವಾಕರ್ ರೆಡ್ಡಿಯನ್ನ ಇಂಡಿಗೋ, ಏರ್ ಇಂಡಿಯಾ ಮತ್ತು ಜೆಟ್ ಏರ್ವೇಸ್ ಸೇರಿದಂತೆ 7 ಏರ್ಲೈನ್ಸ್ ಕಂಪನಿಗಳು ಬ್ಯಾನ್ ಮಾಡಿವೆ.
ನವದೆಹಲಿ (ಜೂ.17):ತೆಲುಗು ದೇಶಂ ಪಾರ್ಟಿ ಶಾಸಕ ಜೆಸಿ ದಿವಾಕರ್ ರೆಡ್ಡಿಯನ್ನ ಇಂಡಿಗೋ, ಏರ್ ಇಂಡಿಯಾ ಮತ್ತು ಜೆಟ್ ಏರ್ವೇಸ್ ಸೇರಿದಂತೆ 7 ಏರ್ಲೈನ್ಸ್ ಕಂಪನಿಗಳು ಬ್ಯಾನ್ ಮಾಡಿವೆ.
ಗುರುವಾರ ಬೆಳಿಗ್ಗೆ ವಿಶಾಖಪಟ್ಟಣಂನಿಂದ ಹೈದರಾಬಾದ್'ಗೆ ದಿವಾಕರ್ ರೆಡ್ಡಿ ಪ್ರಯಾಣಿಸಬೇಕಿತ್ತು. ಬೆಳಿಗ್ಗೆ 8.10 ರೊಳಗೆ ಏರ್ಪೋರ್ಟ್'ಗೆ ಬರಬೇಕಿತ್ತು. ಆದರೆ ದಿವಾಕರ್ ರೆಡ್ಡಿ 28 ನಿಮಿಷ ತಡವಾಗಿ ಬಂದಿದ್ದು, ಏರ್ಪೋರ್ಟ್ ಸಿಬ್ಬಂದಿ ದಿವಾಕರ್ ರೆಡ್ಡಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಾದ ಶಾಸಕ ದಿವಾಕರ್ ರೆಡ್ಡಿ ಏರ್ಪೋರ್ಟ್ ಕಚೇರಿ ಆವರಣದಲ್ಲಿದ್ದ ಪ್ರಿಂಟರ್ ಬಿಸಾಡಿ, ಕಚೇರಿ ಪೀಠೋಪಕರಣಗಳನ್ನು ಹಾನಿಗೊಳಿಸಿ ಸಿಬ್ಬಂದಿಗಳ ಮೇಲೆ ಕೂಗಾಡಿದ್ದಾರೆ. ಅಷ್ಟೇ ಅಲ್ಲದೇ ಏರ್ಲೈನ್ಸ್ ಬಸ್'ನಂತಾಗಿದೆ. ಹೆಚ್ಚು ಹಣ ನೀಡಿದವರಿಗೆ ಅವರು ಟಿಕೆಟ್ ಸೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೆಡ್ಡಿ ಅವಾಂತರದಿಂದ ಬೇಸರಗೊಂಡ ಏರ್ಲೈನ್ಸ್, ಇಂಡಿಗೋ, ಏರ್ ಇಂಡಿಯಾ ಮತ್ತು ಜೆಟ್ ಏರ್ವೇಸ್ ರೆಡ್ಡಿ ವಿಮಾನಯಾನವನ್ನೇ ಬ್ಯಾನ್ ಮಾಡಿದ್ದಾರೆ.
