ಸಂಸದರೊಬ್ಬರ  6ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಟಿಡಿಪಿ ಸಂಸದ ವೈ.ಎಸ್. ಚೌಧರಿ ಅವರಿಗೆ ಸೇರಿದ ಫೆರಾರಿ, ರೇಂಜ್ ರೋವರ್ ಮತ್ತು ಮರ್ಸಿ ಡೀಸ್ ಬೆಂಜ್ ಸೇರಿದಂತೆ 6 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. 

ನವದೆಹಲಿ: ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಶೋಧ ನಡೆಸಲು ನೀಡಿದ್ದ ಸಮ್ಮತಿಯನ್ನು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಹಿಂಪಡೆದುಕೊಂಡ ಬೆನ್ನಲ್ಲೇ, ಟಿಡಿಪಿ ಸಂಸದರೊಬ್ಬರು ಜಾರಿ ನಿರ್ದೇಶನಾಲಯದ (ಇ.ಡಿ.) ಬಲೆಗೆ ಬಿದ್ದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

5700 ಕೋಟಿ ರು. ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಟಿಡಿಪಿ ಸಂಸದ ವೈ.ಎಸ್. ಚೌಧರಿ ಅವರಿಗೆ ಸೇರಿದ ಫೆರಾರಿ, ರೇಂಜ್ ರೋವರ್ ಮತ್ತು ಮರ್ಸಿ ಡೀಸ್ ಬೆಂಜ್ ಸೇರಿದಂತೆ 6 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ. ಮುಂದಿ ನವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.