ಈಗಾಗಲೇ ಜಿಎಸ್‌'ಟಿಯಡಿಯಲ್ಲಿ ನೋಂದಣಿ ಕೆಲಸ ನಡೆಯುತ್ತಿದೆ. ಜಿಎಸ್‌'ಟಿಯಡಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ತಳಮಟ್ಟದ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ. ಸಿಎ ಅಸೋಸಿಯೇಷನ್‌ ಜಿಲ್ಲಾಮಟ್ಟದಲ್ಲಿ ಮತ್ತಷ್ಟುತರಬೇತಿ ನೀಡ ಬೇಕಿದೆ.

ಬೆಂಗಳೂರು(ಜೂನ್ 26): ದೇಶಾದ್ಯಂತ ಜಾರಿಯಾಗುತ್ತಿರುವ ಜಿಎಸ್‌'ಟಿಯಿಂದಾಗಿ ವಸ್ತುಗಳ ಮೇಲಿನ ತೆರಿಗೆ ದರವು ಹೆಚ್ಚಾಗಲಿದೆ ಎಂಬ ಆತಂಕ ಬೇಡ, ಯಾವುದೇ ವಸ್ತುವಿನ ಮೇಲಿನ ತೆರಿಗೆಯು ಸದ್ಯದ ದರಕ್ಕಿಂತ ಹೆಚ್ಚಾಗುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಸಮನ್ವಯ ಸಂಸ್ಥೆ ಆಯೋ ಜಿಸಿದ ಸಂವಾದ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಜಿಎಸ್‌ಟಿ ಯಿಂದ ದರಗಳು ಕಡಿಮೆಯಾಗಲಿವೆ. ದೇಶವು ಒಂದೇ ಮಾರುಕಟ್ಟೆಯಾಗಬೇಕಾದರೆ ಭಯ ಮುಕ್ತ ವಾತಾವರಣ ಇರ ಬೇಕು. ಯಾವುದೇ ವಸ್ತುವಿನ ತೆರಿಗೆ ದರ ವು ಅಧಿಕವಾಗುವುದಿಲ್ಲ. ಜಿಎಸ್‌'ಟಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಇಲ್ಲವೇ ಕಡಿಮೆ ದರ ವಿಧಿಸಬೇಕು. ಉತ್ಪನ್ನಕ್ಕೆ ಲಭ್ಯವಾಗುವ ಇನ್‌'ಪುಟ್‌ ಸಬ್ಸಿಡಿಯ ಲಾಭದ ಬಗ್ಗೆ ಚರ್ಚೆಗಳು ನಡೆಸಬೇಕು ಎಂದರು.

ಜು.1ರಿಂದ ಜಿಎಸ್‌ಟಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೂ.30ರಂದು ಮಧ್ಯರಾತ್ರಿ ಆರ್ಥಿಕ ಸ್ವಾತಂತ್ರ್ಯ ಆಚರಣೆ ಮಾಡಬೇಕಿದೆ. ಈ ಸಂಬಂಧ ಜಂಟಿ ಅಧಿ ವೇಶನ ಕೂಡ ಜರುಗಲಿದೆ ಎಂದರು.

ಈಗಾಗಲೇ ಜಿಎಸ್‌'ಟಿಯಡಿಯಲ್ಲಿ ನೋಂದಣಿ ಕೆಲಸ ನಡೆಯುತ್ತಿದೆ. ಜಿಎಸ್‌'ಟಿಯಡಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ತಳಮಟ್ಟದ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ. ಸಿಎ ಅಸೋಸಿಯೇಷನ್‌ ಜಿಲ್ಲಾಮಟ್ಟದಲ್ಲಿ ಮತ್ತಷ್ಟುತರಬೇತಿ ನೀಡ ಬೇಕಿದೆ. ಪ್ರತಿದಿನ ಸ್ಥಳೀಯ ವ್ಯಾಪಾರಿ ಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ವಲಯದ ಕೇಂದ್ರ ತೆರಿಗೆ ಪ್ರಧಾನ ಮುಖ್ಯ ಆಯುಕ್ತ ವಿನೋದ್‌ ಕುಮಾರ್‌, ಕೇಂದ್ರ ಸುಂಕ ಮತ್ತು ಅಬಕಾರಿ ಪ್ರಧಾನ ಆಯುಕ್ತ ನಾಗೇಂದ್ರ ಕುಮಾರ್‌, ವಿಧಾನಪರಿಷತ್‌ ಸದಸ್ಯ ಲೆಹರ್‌ಸಿಂಗ್‌, ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್‌ ಇತರರಿದ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in