ಭೀಕರ ಕೊಲೆಗೆ ಬೆಚ್ಚಿ ಬಿದ್ದ ರಾಜಧಾನಿ ಜನತೆ| ಶಿರಚ್ಛೇದ ಮಾಡಿ ಟ್ಯಾಟೂ ಆರ್ಟಿಸ್ಟ್ ಭೀಕರ ಕೊಲೆ| ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೀತು ಭಿಭತ್ಸ ಕೃತ್ಯ| ಹಣದ ವಿಷಯಕ್ಕೆ ಟ್ಯಾಟೂ ಆರ್ಟಿಸ್ಟ್‌ನನ್ನು ಕೊಂದ ಸ್ನೇಹಿತರು

ನವದೆಹಲಿ(ಡಿ.18): ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಟ್ಯಾಟೂ ಆರ್ಟಿಸ್ಟ್ ವೋರ್ವನನ್ನು ಆತನ ಸ್ನೇಹಿತರೇ ಶಿರಚ್ಛೇದ ಮಾಡಿ ಕೊಲೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಮಯೂರ್ ವಿಹಾರ್ ಪ್ರದೇಶದಲ್ಲಿ 22 ವರ್ಷದ ಬಬ್ಲೂ ಕುಮಾರ್ ಎಂಬ ಟ್ಯಾಟೂ ಆರ್ಟಿಸ್ಟ್‌ನ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಆತನ ಮೂವರು ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಿಶ್ರಾ, ಅಂಕಿತ್ ಶರ್ಮಾ ಮತ್ತು ಇಂದ್ರಜೀತ್ ಎಂಬಾತನನ್ನು ಬಂಧಿಸಲಾಗಿದ್ದು, ತಾವು ಕೊಟ್ಟಿದ್ದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದೇ ಬಬ್ಲೂ ಕುಮಾರ್ ಕೊಲೆಗೆ ಕಾರಣ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಎಳೆನೀರು ಕತ್ತರಿಸುವ ಮಚ್ಚಿನಿಂದ ಬಬ್ಲೂ ಕುಮಾರ್ ಶಿರಚ್ಛೇದ ಮಾಡಲಾಗಿದ್ದು, ಕೊಲೆಯ ಭೀಕರತೆಗೆ ರಾಷ್ಟ್ರ ರಾಜಧಾನಿ ನವದೆಹಲಿ ಬೆಚ್ಚಿ ಬಿದ್ದಿದೆ.