ಕಳೆದ ಮೂರು ವರ್ಷಗಳಿಂದ ಸತತವಾಗಿ ಟಾಟಾ ಸಂಸ್ಥೆಯಲ್ಲಿ ಇದ್ದು ಈಗ ಗ್ರೂಪ್ ನಿಂದ ಹೊರ ನಡೆದಿದ್ದಾರೆ
ಟಾಟಾ ಸಮೂಹದಲ್ಲಿ ಈಗ ಅನೇಕ ಸಮಸ್ಯಗಳು ಎದುರಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಟಾಟಾ ಸಂಸ್ಥೆಯಿಂದ ಸೈರಸ್ ಮಿಸ್ತ್ರಿಯನ್ನ ಪದಚ್ಯುತಿ ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಂದು ಹೊಡೆತ ಬಿದ್ದಿದೆ. ಟಾಟಾ ಸಮೂಹ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿದ್ದ ಎನ್ ಎಸ್ ರಾಜನ್ ಸಹ ತಮ್ಮ ಹುದ್ದೆಗೆ ರಾಜಿನಾಮೆಯನ್ನ ಶುಕ್ರವಾರ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಟಾಟಾ ಸಂಸ್ಥೆಯಲ್ಲಿ ಇದ್ದು ಈಗ ಗ್ರೂಪ್ ನಿಂದ ಹೊರ ನಡೆದಿದ್ದಾರೆ. ಇನ್ನೂ ಟಾಟಾ ಸಂಸ್ಥೆಯನ್ನ ಸೇರುವ ಮೊದಲು ಎನ್ ಎಸ್ ರಾಜನ್ ಅವರು ಜಾಗತಿಕ ನಾಯಕತ್ವ ಸಂಸ್ಥೆಯ ಪಾಲುದಾರರು ಆಗಿದ್ದರು.
