ಪಾಟ್ನಾ :  ರಫೇಲ್ ಡೀಲ್ ಸಂಬಂಧ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ ಹಿನ್ನೆಲೆ ಪಕ್ಷದ ಹಿರಿಯ ಮುಖಂಡರೋರ್ವರು ಪಕ್ಷವನ್ನು ತೊರೆದಿದ್ದಾರೆ. 

ಎನ್ ಸಿಪಿ ಸಂಸದ  ತಾರಿಕ್ ಅನ್ವರ್   ರಾಜೀನಾಮೆ ನೀಡಿದ್ದು,   ಶರದ್ ಪವಾರ್ ಅವರ ಹೇಳಿಕೆಯಿಂದ ತಮಗೆ ನೋವುಂಟಾಗಿದ್ದಾಗಿ ಹೇಳಿಕೊಂಡಿದ್ದಾರೆ. 

ಇತ್ತೀಚೆಗಷ್ಟೇ  ಅನ್ವರ್ ಅವರು ಬಿಹಾರದ ಕಥಿಹಾರ್ ಕ್ಷೇತ್ರದ ಎಂಪಿಯಾಗಿ ಆಯ್ಕೆಯಾಗಿದ್ದರು.  ಶರದ್ ಪವಾರ್ ಅವರಿಗೆ ಅತ್ಯಂತ ಆಪ್ತರಾಗಿದ್ದು, ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. 

ಇತ್ತೀಚೆಗಷ್ಟೇ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ್ದ ಶರದ್ ಪವಾರ್ ಅವರು ರಫೇಲ್ ಡೀಲ್ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾವುದೇ ರೀತಿಯ ಅನುಮಾನವೂ ಇಲ್ಲ ಎಂದು ಹೇಳಿದ್ದರು.