ಬಿಜೆಪಿ ಸದಸ್ಯೆ ತಾರಾ ಅವರಲ್ಲಿ ಪವರ್ ಜಾಸ್ತಿ ಇದೆ. ತಾರಾ ತುಂಬಾ ಲಕ್ಕಿ ಸದಸ್ಯೆ ಅಂತ ಡಿಕೆಶಿ ಹೇಳಿದರು. ಈ ವೇಳೆ, ಮಧ್ಯೆ ಪ್ರವೇಶಿಸಿದ ಸಚಿವ ಮಹದೇವಪ್ಪ, ತಾರಾ ಬಲ್ಬು, ಡಿ.ಕೆ.ಶಿವಕುಮಾರ್ ಸ್ವಿಚ್ ಇದ್ದಂಗೆ ಅಂತ ಹೇಳಿದರು. ಇವರ ಮಧ್ಯದಲ್ಲಿ ನೀವು ಹೋಗಬೇಡಿ, ಮಧ್ಯೆ ಹೋದರೆ ಕರೆಂಟ್ ಶಾಕ್ ಹೊಡೆಯುತ್ತೆ ಅಂತ ಈಶ್ವರಪ್ಪ ಹೇಳಿಕೆಯಿಂದ ನಗೆಗಡಲಲ್ಲಿ ತೇಲುವಂತೆ ಮಾಡಿತು.
ವಿಧಾನ ಪರಿಷತ್(ನ.29): ವಿಧಾನ ಪರಿಷತ್ನಲ್ಲಿ ಛಾವಣಿ ಸೌರ ವಿದ್ಯುತ್ ಉತ್ಪಾದನೆ ಯೋಜನೆಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಷತ್`ನಲ್ಲಿ ನಗೆ ಪ್ರಸಂಗ ನಡೆಯಿತು. ಪ್ರಶ್ನೆ ಕೇಳುತ್ತಲೇ ಇಂಧನ ಸಚಿವರ ಕಾಲೆಳೆದ ಎಂಎಲ್ಸಿ ತಾರಾ, ಇಂಧನ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನೀವು ಪ್ರಾಮಾಣಿಕವಾಗಿಯೇ ಕೆಲಸ ಮಾಡಿದ್ದೀರಿ, ಆದರೂ ಇಲಾಖೆಯಲ್ಲಿ ಕೆಲ ಅವ್ಯವಹಾರ ನಡೆದಿವೆ ಅಂತ ತಾರಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿ ಸದಸ್ಯೆ ತಾರಾ ಅವರಲ್ಲಿ ಪವರ್ ಜಾಸ್ತಿ ಇದೆ. ತಾರಾ ತುಂಬಾ ಲಕ್ಕಿ ಸದಸ್ಯೆ ಅಂತ ಹೇಳಿದರು. ಈ ವೇಳೆ, ಮಧ್ಯೆ ಪ್ರವೇಶಿಸಿದ ಸಚಿವ ಮಹದೇವಪ್ಪ, ತಾರಾ ಬಲ್ಬು, ಡಿ.ಕೆ.ಶಿವಕುಮಾರ್ ಸ್ವಿಚ್ ಇದ್ದಂಗೆ ಅಂತ ಹೇಳಿದರು. ಇವರ ಮಧ್ಯದಲ್ಲಿ ನೀವು ಹೋಗಬೇಡಿ, ಮಧ್ಯೆ ಹೋದರೆ ಕರೆಂಟ್ ಶಾಕ್ ಹೊಡೆಯುತ್ತೆ ಅಂತ ಈಶ್ವರಪ್ಪ ಹೇಳಿಕೆಯಿಂದ ನಗೆಗಡಲಲ್ಲಿ ತೇಲುವಂತೆ ಮಾಡಿತು.
