ಬಳ್ಳಾರಿಯಲ್ಲಿ ಮಾತನಾಡಿದ ಟಪಾಲ್ ಗಣೇಶ್, ಮಗಳ ಮದುವೆ ಅಂದ್ರೆ ಯಾರೀಗಾದರೂ ಸಂಭ್ರಮ ಇರುತ್ತೆ. ರೆಡ್ಡಿ ಮಗಳ ಮದುವೆ ಬಗ್ಗೆ ನನಗೆ ಯಾವುದೇ ಆಕ್ಷೇಪಗಳಿಲ್ಲ. ಆದರೆ ಮದುವೆಗೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಆಕ್ಷೇಪವಿದೆ. ಅಕ್ರಮ ಗಣಿ ಆರೋಪದಲ್ಲಿ ರೆಡ್ಡಿಯವರ ಖಾತೆಗಳು ಜಪ್ತಿಯಾಗಿವೆ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿತ್ತು. ಜನಾರ್ದನ ರೆಡ್ಡಿಗೆ ಹಣ ಎಲ್ಲಿಂದ ಬಂತು ಅಂತಾ ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.
ಬಳ್ಳಾರಿ(ಅ.20): ಮಾಜಿ ಸಚಿವ ಜನಾರ್ದನ ರೆಡ್ಡಿ, ತಮ್ಮ ಪುತ್ರಿಯ ವಿವಾಹ ಅದ್ದೂರಿಯಾಗಿ ನಡೆಸಲು ಸಜ್ಜಾಗ್ತಿದ್ದಾರೆ. ಮದುವೆ ಆಮಂತ್ರಣ ಸೇರಿ ಎಲ್ಲವನ್ನೂ ವೈಭವಯುತವಾಗಿ ತಯಾರಿಸಲಾಗುತ್ತಿದೆ. ಆದರೆ, ಈ ಅದ್ದೂರಿ ಮದುವೆಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ತಗಾದೆ ತೆಗೆದಿದ್ದಾರೆ.