ಸರ್ಕಾರಿ ಸಾರಿಗೆ ನೌಕರರ ಮುಷ್ಕರದಿಂದ ಕಂಗೆಟ್ಟವರಿಗೆ ನೆರವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಯೊಬ್ಬರು ಸಾರಿಗೆ ವಾಹನದ ಚಾಲಕ ರಾಗಿ ಕಾರ್ಯ ನಿರ್ವಹಿಸಿದ ಘಟನೆಗೆ ತಮಿಳುನಾಡಲ್ಲಿ ನಡೆದಿದೆ.
ಚೆನ್ನೈ(ಜ.08): ಸರ್ಕಾರಿ ಸಾರಿಗೆ ನೌಕರರ ಮುಷ್ಕರದಿಂದ ಕಂಗೆಟ್ಟವರಿಗೆ ನೆರವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಯೊಬ್ಬರು ಸಾರಿಗೆ ವಾಹನದ ಚಾಲಕ ರಾಗಿ ಕಾರ್ಯ ನಿರ್ವಹಿಸಿದ ಘಟನೆಗೆ ತಮಿಳುನಾಡಲ್ಲಿ ನಡೆದಿದೆ.
ಮುಷ್ಕರದಿಂದ ಪ್ರಯಾಣಿಕರು ಯಾವುದೇ ವಾಹನಗಳ ಸೌಕರ್ಯವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಮನಗಂಡ ಶಾಸಕ ರಾಜಕೃಷ್ಣನ್ 70 ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಂಡು ಅಂಧಿಯೂರಿನಿಂದ ಭವಾನಿ ಎಂಬಲ್ಲಿಗೆ ತಾವೇ ಬಸ್ಸನ್ನು ಚಲಾಯಿಸಿ ಕೊಂಡು ಹೋಗಿದ್ದಾರೆ.
