ಜಯಲಲಿತಾ ಅವರ ಸಾವಿನ ಕುರಿತು ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ, ಜಯಲಲಿತಾ ಅಂತ್ಯಕ್ರಿಯೆ ಮಾಡಿದ ವೆಚ್ಚವೆಷ್ಟು ಎನ್ನುವ ವಿಚಾರ ಹೊರಬಿದ್ದಿದೆ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯಕ್ರಿಯೆಗೆ ತಮಿಳುನಾಡು ಸರ್ಕಾರ 99.33 ಲಕ್ಷ ರು. ವೆಚ್ಚ ಮಾಡಿದೆ ಎಂಬ ಸಂಗತಿ ಆರ್‌ಟಿಐ ಅಡಿ ಕೇಳಲಾದ ಪ್ರಶ್ನೆಯಿಂದ ಬೆಳಕಿಗೆ ಬಂದಿದೆ.

ಜಯಲಲಿತಾ ಅವರ ಸಾವಿನ ಕುರಿತು ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ, ಈ ಮಾಹಿತಿ ಹೊರಬಿದ್ದಿದೆ. ಜಯಲಲಿತಾ ಅವರ ಅಂತ್ಯಕ್ರಿಯೆಯ ವೆಚ್ಚದ ವಿವರ ಕೋರಿ, ಮದುರೈನ ಸಯೀದ್‌ ತಮೀಮ್‌ ಎನ್ನುವವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

ಇದೇ ವೇಳೆ, ಅಪೊಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಚಿಕಿತ್ಸೆಗೆ ತಮಿಳುನಾಡು ಸರ್ಕಾರ ಯಾವುದೇ ವೆಚ್ಚ ಮಾಡಿಲ್ಲ. ವೈಯಕ್ತಿಕವಾಗಿ ಅವರ ಕುಟುಂಬವೇ ಭರಿಸಿದೆ ಎಂಬ ಉತ್ತರ ಲಭ್ಯವಾಗಿದೆ.