ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ ಸಾವಿನ ತನಿಖೆ ನಡೆಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಇಂದು ಅವಸರವಸರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಜಯಾಲಲಿತಾ ಸಾವಿನ ತನಿಖೆಯನ್ನು ನಡೆಸುವುದಾಗಿ ಘೋಷಿಸಿದರು.
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಾಲಲಿತಾ ಸಾವಿನ ತನಿಖೆ ನಡೆಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.
ಇಂದು ಅವಸರವಸರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಜಯಾಲಲಿತಾ ಸಾವಿನ ತನಿಖೆಯನ್ನು ನಡೆಸುವುದಾಗಿ ಘೋಷಿಸಿದರು.
ಆದರೆ ತನಿಖೆಯನ್ನು ಯಾರು ನಡೆಸಲಿದ್ದಾರೆ ಎಂಬುವುದನ್ನು ತಿಳಿಸದ ಅವರು, ಮಾಜಿ ನ್ಯಾಯಾಧೀಶರ ಹೆಸರನ್ನು ಶೀಘ್ರದಲ್ಲೇ ಘೋಷಿಸಿಸುವುದಾಗಿ ಹೇಳಿದ್ದಾರೆ.
ಅಮ್ಮಾ ಸಾವಿನ ತನಿಖೆಯಾಗಬೇಕೆಂದು ವ್ಯಾಪಕವಾಗಿ ಮನವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದ ಪಳನಿಸ್ವಾಮಿ, ಈ ಬಗ್ಗೆ ಗಹನವಾದ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 5 ರಂದು ಅಕಾಲಿಕ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು.
ಜಯಲಲಿತಾ ಸಾವು ಪ್ರಕರಣ ಕುರಿತು ಸಿಬಿಐ ತನಿಖೆ ಆದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಈ ಹಿಂದೆ ಜಯಾ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದ್ದವು. ತಮಿಳು ಚಿತ್ರನಟಿ ಗೌತಮಿ ಕೂಡ ಜಯಾ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು.
