Asianet Suvarna News Asianet Suvarna News

ತಮಿಳುನಾಡಿನ ಶಾಲೆಗಳಲ್ಲಿ ಕರ್ನಾಟಕ ಸೈಕಲ್‌ ವಿತರಣೆ!

ತಮಿಳುನಾಡಿನ ಶಾಲೆಯೊಂದರಲ್ಲಿ ವಿತರಣೆ ಮಾಡಲಾದ ಸೈಕಲ್ ಮೇಲೆ ಕರ್ನಾಟಕ ಸರ್ಕಾರ ಚಿಹ್ನೆ ಇರುವುದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದರಿಂದ ತಮಿಳುನಾಡು ಸರ್ಕಾಕ್ಕೆ ಮುಜುಗರ ಉಂಟಾಗಿದೆ. 

Tamilnadu Government Distributed Karnataka scheme logo Bicycles
Author
Bengaluru, First Published Dec 3, 2018, 9:45 AM IST

ವಿಲ್ಲುಪುರಂ: ತಮಿಳುನಾಡಿನ ವಿಲ್ಲುಪುರಂನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಶನಿವಾರ ವಿತರಿಸಲಾದ ಸೈಕಲ್‌ನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಚಿಹ್ನೆ ಮತ್ತು ಕನ್ನಡದ ಬರಹ ಪತ್ತೆಯಾಗಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಈ ಘಟನೆ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.

ಜಿಲ್ಲೆಯ ತಳುತಾಲಿ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ರಾಜ್ಯ ಸರ್ಕಾರದ ವತಿಯಿಂದ ಉಚಿತ ಸೈಕಲ್‌ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಜಿಲ್ಲಾಧಿಕಾರಿ ಷಣ್ಮುಗಂ, ರಾಜ್ಯದ ಕಾನೂನು ಸಚಿವರು ಸೇರಿ ಹಲವು ರಾಜಕೀಯ ನೇತಾರರು ಭಾಗಿಯಾಗಿದ್ದರು.

ಮಕ್ಕಳಿಗೆ ಸೈಕಲ್‌ ವಿತರಣೆಯಾಗುತ್ತಲೇ, ಅದರ ಮೇಲೆ ಮಾಜಿ ಸಿಎಂ ಜಯಲಲಿತಾ ಫೋಟೋ ಬದಲಾಗಿ ಬಾಲಕಿಯೊಬ್ಬಳ ಫೋಟೋ ಮತ್ತು ಅದರ ಮೇಲೆ ಕನ್ನಡದ ಅಕ್ಷರಗಳು ಕಂಡುಬಂದಿವೆ. ಇದು ವಿವಾದಕ್ಕೆ ಕಾರಣವಾಯ್ತು. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು, ಸೈಕಲ್‌ನ ಬಿಡಿಭಾಗಗಳನ್ನು ಕರ್ನಾಟಕದಿಂದ ತರಿಸಲಾಗಿತ್ತು. ಬಿಡಿಭಾಗ ಕಳುಹಿಸಿದ ಕಂಪನಿಯವರು ಕರ್ನಾಟಕದ ಚಿಹ್ನೆ ಸಮೇತ ಕಳುಹಿಸಿದ್ದಾರೆ. ಅದನ್ನು ಬದಲಾಯಿಸುವಷ್ಟುಸಮಯ ಇಲ್ಲದ ಕಾರಣಕ್ಕೆ ಹಾಗೆಯೇ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios