ವಿಶ್ವಾಸ ಮತ ಯಾಚನೆ ವೇಳೆ ನಡೆದ ಗದ್ದಲ, ಪ್ರತಿಭಟನೆಗಳಿಂದಾಗಿ ವಿಶ್ವಾಸಮತ ಯಾಚನೆ ಮುಂದೂಡಲಾಗಿದೆ.

ಚೆನ್ನೈ (ಫೆ.18): ತಮಿಳುನಾಡು ಅಸೆಂಬ್ಲಿಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಗದ್ದಲ್ಲಕ್ಕೆ ಸ್ಪೀಕರ್ ಬೆದರಿ ಹೊರನಡೆದಿದ್ದು, ಪ್ರಕ್ರಿಯೆಯನ್ನು ಒಂದು ಗಂಟೆಯವರೆಗೆ ಮುಂದೂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದನ ಆರಂಭವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಬಣ, ಡಿಎಂಕೆ, ಹಾಗೂ ಇತರ ವಿಪಕ್ಷಗಳು ರಹಸ್ಯ ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಅದಕ್ಕೊಪ್ಪದ ಸ್ಪೀಕರ್ ಧ್ವನಿ ಮತದಾನ ನಡೆಸಲು ಆರಂಭಿಸಿದ್ದಾರೆ.

ಅದರಿಂದ ಕುಪಿತರಾದ ಶಾಸಕರು ಸ್ಪೀಕರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಪೀಕರ್ ಮುಖಕ್ಕೆ ಕುರ್ಚಿ ಎಸದಿದ್ದು, ಟೇಬಲ್ ಮುರಿಯಲು ಮುಂದಾಗಿದ್ದಾರೆ.

ಶಾಸಕರ ಕೂಗಾಟ, ಹೊಡೆದಾಟ, ಬೈಗುಳಗಳ ಅಬ್ಬರಕ್ಕೆ ಸದನದಲ್ಲಿದ್ದ ಕುರ್ಚಿಗಳು ಪುಡಿಪುಡಿಯಾಗಿದ್ದು ಮೇಜುಗಳು ಜಖಂಗೊಂಡಿವೆ.

ಸ್ಪೀಕರ್​ ಮೈಕುಗಳನ್ನು ಕಿತ್ತೆಸೆದು ಆರ್ಭಟಿಸಿದ ಶಾಸಕರು, ಅವರ ಕುರ್ಚಿ ಮೇಲೇ ಹೋಗಿ ಕುಳಿತಿದ್ದಾರೆ.

ಶಾಸಕರ ಗೂಂಡಾ ವರ್ತನೆಗೆ ಬೆದರಿದ ಸ್ಪೀಕರ್, ವಿಶ್ವಾಸ ಮತಯಾಚನೆಯನ್ನು ಒಂದು ಗಂಟೆವೆರೆಗೆ ಮುಂದೂಡಿದ್ದಾರೆ.

ಅಸೆಂಬ್ಲಿ ಗಲಾಟೆಯಲ್ಲಿ ಅಧಿಕಾರಿಯೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು ಪೊಲೀಸರು ಅವರನ್ನು ಅಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಾಜಿ ರಕ್ತದೊತ್ತಡದಿಂದ ಕುಸಿದು ಬಿದ್ದು ಗಾಯಗಳಾಗಿವೆ.