ತಮಿಳುನಾಡು ಕರ್ನಾಟಕದಿಂದ ಕಾವೇರಿ ನೀರು ಪಡೆಯಲು ಸಾಧ್ಯವೇ ಇಲ್ಲ: ಸುಬ್ರಮಣಿಯನ್ ಸ್ವಾಮಿ

First Published 6, Feb 2018, 12:25 PM IST
Tamilnadu cant get Cauvery Water from Karnataka Says Subramaniyan Swamy
Highlights

ತಮಿಳುನಾಡು ಕರ್ನಾಟಕದಿಂದ ಕಾವೇರಿ ನೀರು ಪಡೆಯಲು ಸಾಧ್ಯವೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದಿಸಿದ್ದಾರೆ.

ಚೆನೈ (ಫೆ.06):  ತಮಿಳುನಾಡು ಕರ್ನಾಟಕದಿಂದ ಕಾವೇರಿ ನೀರು ಪಡೆಯಲು ಸಾಧ್ಯವೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದಿಸಿದ್ದಾರೆ.

ತಮಿಳಿಗರು ತಾವು ಬೆಳೆದ ಸಾಂಬಾ ಬೆಳೆ ಉಳಿಸಿಕೊಳ್ಳಲು ಕರ್ನಾಟಕದ ಕದ ತಟ್ಟುತ್ತಿದ್ದಾರೆ. ಬದಲಾಗಿ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಸ್ಥಾವರಗಳನ್ನು ಕರಾವಳಿ ತೀರದುದ್ದಕ್ಕೂ ಸ್ಥಾಪಿಸುವುದರಿಂದ ರಾಜ್ಯ-ರಾಜ್ಯಗಳ ನೀರಿನ ವ್ಯಾಜ್ಯ ಬಗೆಹರಿಸಬಹುದು. ಜನರು ತಮಗೆ ಕಾವೇರಿ ಬೇಕೇ, ಅಥವಾ ನೀರು ಬೇಕೇ ಎಂಬುದನ್ನು ಮೊದಲು ನಿರ್ಧರಿಸಬೇಕು. ಅವರು ಕಾವೇರಿಯನ್ನೇ ಬಯಸುತ್ತಿದ್ದರೆ ಖಂಡಿತ ಅವರು ನೀರು ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಅವರು ನೀರನ್ನು ಮಾತ್ರ ಬಯಸುತ್ತಿದ್ದರೆ, ಭಾರತದಲ್ಲಿರುವ ಅಪರಿಮಿತ ಪ್ರಮಾಣದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಬಹುದು. ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ಇಸ್ರೇಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ವಿವಾದವೇ ಇರುವುದಿಲ್ಲ ಎಂದು ಕಾವೇರಿ ವಿವಾದದ ಕುರಿತು ಪ್ರತಿಕ್ರಿಯಿಸಿದರು.

loader