ಕರ್ನಾಟಕದ ಹಲವೆಡೆ ತಮಿಳರ ಆಸ್ತಿಪಾಸ್ತಿಗೆ ವ್ಯವಸ್ಥಿತವಾಗಿ ಬೆಂಕಿ ಹಚ್ಚಿಲಾಗಿದೆ

ನವದೆಹಲಿ(ಸೆ.29): ಸುಪ್ರೀಂಕೋರ್ಟ್ ಆದೇಶದ ಬಳಿಕ ಕಾವೇರಿ ನದಿ ನಿರು ವಿವಾದಕ್ಕೆ ಸಂಬಂಧಿಸಿದಂತೆ ಇವತ್ತು ಕೇಂದ್ರ ಸಚಿವೆ ಉಮಾಭಾರತಿ ನೇತ್ಋತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ಸಭೆ ನಡೆಯಿತು. ಕೇಂದ್ರ ತಂಡ ಕಳುಹಿಸಿ ವಾಸ್ತವ ಸ್ಥಿತಿ ಅರಿಯಬೇಕೆಂಬ ಕರ್ನಾಟಕದ ವಾದಕ್ಕೆ ತಮಿಳುನಾಡು ಒಪ್ಪಲಿಲ್ಲ. ಇಷ್ಟೇ ಅಲ್ಲ, ಸಭೆಯಲ್ಲಿ ತಮಿಳುನಾಡು ಸರ್ಕಾರ, ಕರ್ನಾಟಕದ ವಿರುದ್ಧ ಟೀಕೆಗಳ ಸುರಿಮಳೆಗೈದಿದೆ.

ಕರ್ನಾಟಕ ವಿರುದ್ಧ ಟೀಕೆಗಳ ಸುರಿಮಳೆಗೈದ ತಮಿಳುನಾಡು

- ನ್ಯಾಯಾಧೀಕರಣದ ಅಂತಿಮ ಆದೇಶದಂತೆ ಕೂಡಲೇ ನೀರು ಬಿಡಬೇಕು

- ಸೆ.26ರವರೆಗೆ 76.042 ಟಿಎಂಸಿ ನೀರು ಬಿಡುಗಡೆ ಮಾಡಬೇಕು

- ಸಾಂಬಾ ಬೆಳೆಗೆ , ಕುಡಿಯುವ ನೀರಿನ ಅಗತ್ಯತೆಗೆ ಬಿಡುಗಡೆ ಮಾಡಬೇಕು

- ಸುಪ್ರೀಂಕೋರ್ಟ್ ಆದೇಶದಂತೆ ಅಷ್ಟೂ ನೀರನ್ನು ಕೂಡಲೇ ಬಿಡಲು

- ನೀರು ಬಿಡಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು

- ಸುಪ್ರೀಂ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ಕೂಡಲೇ ರಚಿಸಬೇಕು

- ಕರ್ನಾಟಕ ನೀರು ಬಿಡದೇ ಈ ಸಭೆ ಯಶಸ್ವಿಯಾಗಲು ಸಾಧ್ಯವಿಲ್ಲ

- ಸಭೆಯಲ್ಲಿ ತಮಿಳುನಾಡು ಸರ್ಕಾರದ ಮೊಂಡು ವಾದ

- ಕರ್ನಾಟಕದ ವಿರುದ್ಧ ಕೇಂದ್ರಕ್ಕೆ ಸುಳ್ಳು ವರದಿ ನೀಡಿದ ತಮಿಳುನಾಡು

- ಕಾವೇರಿ ವಿವಾದದ ವೇಳೆ ತಮಿಳರ ಮೇಲೆ ದೌರ್ಜನ್ಯ ನಡೆದಿದೆ

- ಕರ್ನಾಟಕದಲ್ಲಿ ವಾಸಿಸುವ ತಮಿಳರ ಮೇಲೆ ಹಿಂಸಾಚಾರ

- ನೀರು ಬಿಡಬೇಕೆಂಬ ಸೆ.5ರ ಸುಪ್ರೀಂ ಆದೇಶದ ನಂತರ ಹಿಂಸಾಚಾರ

- ಕರ್ನಾಟಕದ ಹಲವೆಡೆ ತಮಿಳರ ಆಸ್ತಿಪಾಸ್ತಿಗೆ ವ್ಯವಸ್ಥಿತವಾಗಿ ಬೆಂಕಿ ಹಚ್ಚಿಲಾಗಿದೆ

- ತಮಿಳುನಾಡು ನೋಂದಣಿಯ ವಾಹನಗಳನ್ನು ಸುಡಲಾಗಿದೆ

- ಹಿಂಸಾಚಾರ ನಡೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ

- ಈ ಘಟನೆಗಳು ಅನೇಕ ರಾಜಕೀಯ ಪಕ್ಷಗಳಿಂದ ಪ್ರೇರಣೆಯಿಂದ ನಡೆದಿದೆ

- ಆಗ, ಕಾನೂನು ಸುವ್ಯವಸ್ಥೆ ಪಾಲಿಸುವವರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು

- ಆದರೆ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಲಾಗಿತ್ತು

- ತಮಿಳುನಾಡಿನಲ್ಲಿರು ಕನ್ನಡಿಗರು, ಅವರಿಗೆ ಸೇರಿದ ಉದ್ಯಮ, ಆಸ್ತಿಪಾಸ್ತಿಗಳನ್ನು ರಕ್ಷಿಸಲಾಗಿದೆ

- ಸಚಿವೆ ಉಮಾಭಾರತಿ ಎದುರು ದೂರುಗಳ ಸುರಿಮಳೆಗೈದ ತಮಿಳುನಾಡು