ಮಂಡ್ಯ(ಸೆ.09): ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ತಮಿಳರು ಬೆಂಬಲ ಸೂಚಿಸಿದ್ದಾರೆ.

ತಮಿಳು ಕಾಲೋನಿ, ನೆಹರು ನಗರ, ಮಂಡ್ಯ ನಗರ ತಮಿಳು ನಿವಾಸಿಗಳಿಂದ ಪ್ರತಿಭಟನೆಗೆ ಬೆಂಗಲ ವ್ಯಕ್ತವಾಗಿದ್ದು, ಖಾಲಿ ಕೊಡಗಳನ್ನು ಹೊತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕಾವೇರಿ ಹೋರಾಟಕ್ಕೆ ತಮಿಳರು ಕೂಡಾ ಬೆಂಬಲಿಸಿದ್ದಾರೆ.