ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್, ಎಐಎಡಿಎಂಕೆ ಲಂಚ ನೀಡಿಕೆ ಪ್ರಕರಣ ಇದೇ ಮೊದಲಲ್ಲ. ಮತದಾರರನ್ನು ಒಳಗೊಂಡಂತೆ ಚುನಾವಣಾ ಆಯೋಗಕ್ಕೂ ಅವರು ಲಂಚ ನೀಡಿದ್ದರು. ಈಗ ಸೆರಮನೆ ಸಿಬ್ಬಂದಿಗೆ ನೀಡುತ್ತಿದ್ದಾರೆ ಅಷ್ಟೆ'

ಚೆನ್ನೈ(ಜು.13): ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಶಶಿಕಲಾ ಸೆರೆಮನೆಯಲ್ಲಿ 2 ಕೋಟಿ ಕೊಟ್ಟು ರಾಜಾತಿಥ್ಯ ಪಡೆಯುತ್ತಿರುವ ಬಗ್ಗೆ ರಾಜ್ಯ ಕಾರಾಗೃಹಗಳ ಡಿಐಜಿ ಡಿ.ರೂಪ ಅವರು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ವಿರೋಧ ಪಕ್ಷ ಡಿಎಂಕೆ ಆಗ್ರಹಿಸಿದೆ.

ಶಶಿಕಲಾಗೆ ವಿಶೇಷ ಕೊಠಡಿ ಸೇರಿದಂತೆ ಹಲವು ಸೌಲಭ್ಯ ನೀಡಲಾಗಿದ್ದು, ಇದರಲ್ಲಿ ಜೈಲು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಡಿ.ರೂಪ ಅವರು ಮಾಡಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್, ಎಐಎಡಿಎಂಕೆ ಲಂಚ ನೀಡಿಕೆ ಪ್ರಕರಣ ಇದೇ ಮೊದಲಲ್ಲ. ಮತದಾರರನ್ನು ಒಳಗೊಂಡಂತೆ ಚುನಾವಣಾ ಆಯೋಗಕ್ಕೂ ಅವರು ಲಂಚ ನೀಡಿದ್ದರು. ಈಗ ಸೆರಮನೆ ಸಿಬ್ಬಂದಿಗೆ ನೀಡುತ್ತಿದ್ದಾರೆ ಅಷ್ಟೆ'

ಈ ಬಗ್ಗೆ ಎಲ್ಲ ಹಂತಗಳಿಂದ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಚ ನೀಡಿಕೆಯ ಪ್ರಕರಣಗಳ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.