ಚೆನ್ನೈ(ಮಾ.09): ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರಾಗಿದ್ದು ಅವರು ದೇಶಕ್ಕೂ ತಂದೆ ಇದ್ದಂತೆ, ಹೀಗಾಗಿ ಮೋದಿ ನಾಯಕತ್ವ ಒಪ್ಪಿದ್ದೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.

'ಎಐಎಡಿಎಂಕೆ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಂದೆ ಸಮಾನರು ಹೀಗಾಗಿ ಅವರ ನಾಯಕತ್ವದಲ್ಲಿ ಮತ್ತು ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಬಾಲಾಜಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ನಾಯಕಿ ಜಯಲಲಿತಾ ನಿಧನವಾದ ನಂತರ ಮೋದಿಯೇ ನಮಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಅಮ್ಮ (ಜಯಲಲಿತಾ) ನಿಧನದ ನಂತರ ಅವರೇ (ಮೋದಿ) ನಮಗೆಲ್ಲಾ ಡ್ಯಾಡಿ ಎಂದು ಬಾಲಾಜಿ ಹೇಳಿದ್ದಾರೆ.