ಜಯಾ ಹಣ ಲೂಟಿ : ಉಲ್ಟಾ ಹೊಡೆದ ಸಚಿವ

First Published 21, Jun 2018, 7:45 AM IST
Tamil nadu Minister Dindigul Srinivasan Sensational Talk
Highlights

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರು ಕೊಳ್ಳೆ ಹೊಡೆದ ಅಕ್ರಮ ಹಣವನ್ನು ಎಎಂಎಂಕೆ ಮುಖಂಡ ಮತ್ತು ಶಾಸಕ ಟಿ.ಟಿ.ವಿ.ದಿನಕರನ್‌ ಮತ್ತು ಅವರ ಕುಟುಂಬ ಬಳಸಿಕೊಂಡಿದೆ ಎಂಬುದಾಗಿ ಆರೋಪಿಸಿದ್ದ ತಮಿಳುನಾಡು ಸಚಿವರೊಬ್ಬರು ಇದೀಗ ಉಲ್ಟಾಹೊಡೆದಿದ್ದಾರೆ.

ಮದುರೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರು ಕೊಳ್ಳೆ ಹೊಡೆದ ಅಕ್ರಮ ಹಣವನ್ನು ಎಎಂಎಂಕೆ ಮುಖಂಡ ಮತ್ತು ಶಾಸಕ ಟಿ.ಟಿ.ವಿ.ದಿನಕರನ್‌ ಮತ್ತು ಅವರ ಕುಟುಂಬ ಬಳಸಿಕೊಂಡಿದೆ ಎಂಬುದಾಗಿ ಆರೋಪಿಸಿದ್ದ ತಮಿಳುನಾಡು ಸಚಿವರೊಬ್ಬರು ಇದೀಗ ಉಲ್ಟಾಹೊಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಅರಣ್ಯ ಸಚಿವ ದಿಂಡಿಗಲ್‌ ಸಿ.ಶ್ರೀನಿವಾಸನ್‌ ಅವರು, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದರು ಎಂದು ಹೇಳಿಯೇ ಇಲ್ಲ. ಇದರ ಬದಲಿಗೆ ಜಯಲಲಿತಾ ಅವರಿಗೆ ತಿಳಿಯದಂತೆ ದಿನಕರನ್‌ ಸೇರಿದಂತೆ ಜಯಾ ಆಪ್ತೆಯಾಗಿದ್ದ ಶಶಿಕಲಾ ಅವರ ಕುಟುಂಬಸ್ಥರು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿದ್ದರು ಎಂಬುದಾಗಿ ಹೇಳಿದ್ದೆ, ಎಂದಿದ್ದಾರೆ.

ಆದರೆ, ಅಮ್ಮನ ಕುರಿತು ನಾನು ಸೇರಿದಂತೆ ಯಾರೊಬ್ಬರು ಇಂಥ ಆರೋಪ ಮಾಡಲು ಸಾಧ್ಯವಿಲ್ಲ. ಈ ರೀತಿ ಕೊಳ್ಳೆ ಹೊಡೆದ ಹಣವನ್ನೇ ದಿನಕರನ್‌ ಅವರು ತಮ್ಮ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

loader