ದಂಪತಿ ನಡುವಿನ ಕಲಹವು ವಿಕೋಪಕ್ಕೆ ತಿರುಗಿ ಪ್ರಸಿದ್ಧ ನಟನ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತಮಿಳು ನಟ ಸಿದ್ಧಾರ್ಥ್ ಗೋಪಿನಾಥ್ ಪತ್ನಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಚೆನ್ನೈ : ಪ್ರಸಿದ್ಧ ನಟನ ಪತ್ನಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ತಮಿಳು ನಟ ಸಿದ್ಧಾರ್ಥ್ ಪತ್ನಿ ಮನೆಯ ಕೋಣೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಈ ಘಟನೆಗೂ ಮೊದಲೇ ನಟ ಸಿದ್ಧಾರ್ಥ್ ಗೋಪಿನಾಥ್ ಹಾಗೂ ಪತ್ನಿ ನಡುವೆ ಸಣ್ಣ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಇದಾದ ಬಳಿಕ ಸಿದ್ಧಾರ್ಥ್ ಪತ್ನಿ ಸ್ಮ್ರಿಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.
ಖಾಸಗಿ ವಿಚಾರಕ್ಕೆ ಕಳೆದ ರಾತ್ರಿ ದಂಪತಿಯ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಇದೇ ವಾಗ್ವಾದ ಗಂಭೀರ ಸ್ವರೂಪ ಪಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಬೆಳಗ್ಗೆದ್ದು ನಟ ಸಿದ್ಧಾರ್ಥ್ ಬಾಗಿಲು ಬಡಿದು ಯಾವುದೇ ಪ್ರತಿಕ್ರಿಯ ಬಾರದ ಕಾರಣ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
