ಆಫ್ಘನ್ ರಾಜಧಾನಿ ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿಗೆ 40 ಬಲಿ

news | Saturday, January 27th, 2018
Suvarna Web Desk
Highlights

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ 40 ಮಂದಿ ಬಲಿಯಾಗಿದ್ದು, 140 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ತಾಲಿಬಾನಿ ಉಗ್ರರು ಹೊಣೆ ಹೊತ್ತಿದ್ದಾರೆ.

ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 40 ಮಂದಿ ಬಲಿಯಾಗಿದ್ದು, 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ತಾಲಿಬಾನಿ ಉಗ್ರರು ಹೊಣೆ ಹೊತ್ತಿದ್ದಾರೆ.

ಸಾರ್ವಜನಿಕರ ವಾಹನಗಳಿಗೆ ನಿಷೇಧವಿರುವ ರಸ್ತೆಗೆ ಸ್ಫೋಟಕಗಳಿರುವ ಆ್ಯಂಬುಲೆನ್ಸ್ ಮೂಲಕ ತೆರಳಿ, ಈ ದಾಳಿ ನಡೆಸಲಾಗಿದೆ. ಯುರೋಪ್ ಒಕ್ಕೂಟ ಹಾಗೂ ಉನ್ನತ ಶಾಂತಿ ಪರಿಷತ್‌ನ ಹಳೆ ಕಚೇರಿ ಇದ್ದ ಆಂತರಿಕ ಸಚಿವಾಲಯದ ಕಟ್ಟಡ ಸಮೀಪ ಈ ಅನಾಹುತ ನಡೆದಿದೆ. 

ವಾರದೆ ಹಿಂದೆಯಷ್ಟೇ ತಾಲಿಬಾನ್ ಉಗ್ರರು ಇಲ್ಲಿನ ಐಷಾರಾಮಿ ಹೊಟೇಲ್ ಸಮೀಪ ನಡೆಸಿದ ದಾಳಿಗೆ 20 ಮಂದಿ ಮೃತಪಟ್ಟಿದ್ದರು. ನಗರದ ಪೊಲೀಸ್ ಠಾಣೆ, ರಾಯಭಾರಿ ಕಚೇರಿಗಳಿರುವ ಈ ಪ್ರದೇಶದಲ್ಲಿ ಹೆಚ್ಚು ಜನರು ಕಿಕ್ಕಿರಿದು ಸೇರಿದ್ದು, ಈ ಸಂದರ್ಭದಲ್ಲಿ ಈ ಅನಾಹುತ ನಡೆದಿದೆ.

ಮೃತಪಟ್ಟವರ ಸಂಖ್ಯೆ ಏರುವ ಸಾಧ್ಯತೆಯಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 

Comments 0
Add Comment

    Related Posts