ಕೋಲ್ಕತಾದಲ್ಲಿ ಸೊಳ್ಳೆ ಹರಡುವ ಮನೆಗಳಿಗೆ 1 ಲಕ್ಷ ರು. ವರೆಗೂ ದಂಡ

Take Action to Control Mosquitos In Kolkata
Highlights

ಸೊಳ್ಳೆಗಳು ಹರಡದಂತೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಅದನ್ನು ಪಾಲಿಸುವುದೇ ಇಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಶ್ಚಿಮ ಬಂಗಾಳ ವಿಧಾನನಭೆ, ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿರುವ ಮನೆಯ ಮಾಲೀಕರಿಗೆ ಭಾರೀ ದಂಡ ವಿಧಿಸಲು ಮುಂದಾಗಿದೆ.

ಕೋಲ್ಕತಾ: ಸೊಳ್ಳೆಗಳು ಹರಡದಂತೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಅದನ್ನು ಪಾಲಿಸುವುದೇ ಇಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪಶ್ಚಿಮ ಬಂಗಾಳ ವಿಧಾನನಭೆ, ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿರುವ ಮನೆಯ ಮಾಲೀಕರಿಗೆ ಭಾರೀ ದಂಡ ವಿಧಿಸಲು ಮುಂದಾಗಿದೆ.

ಕೋಲ್ಕತಾ ಮತ್ತು ಹೌರಾ ನಗರ ಪಾಲಿಕೆಗಳಿಗೆ ಸೊಳ್ಳೆಗಳು ಕಾರಣವಾಗುವ ಮನೆಗಳಿಗೆ 1 ಲಕ್ಷ ರು. ವರೆಗೂ ದಂಡ ವಿಧಿಸಲು ಅಧಿಕಾರ ನೀಡುವ ಎರಡು ಮಸೂದೆಗಳನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ.

ಕೋಲ್ಕತಾದಲ್ಲಿ ಸದ್ಯ ಸೊಳ್ಳೆಗಳನ್ನು ಹರಡುತ್ತಿರುವ ಮನೆಗಳಿಗೆ ಗರಿಷ್ಠ 5000 ರು. ವರೆಗೂ ದಂಡ ವಿಧಿಸಲಾಗುತ್ತಿದೆ. ಮಸೂದೆ ಜಾರಿಗೆ ಬಂದ ಬಳಿಕ ಕನಿಷ್ಠ ದಂಡದ ಪ್ರಮಾಣ 500 ರು.ನಿಂದ 1000 ರು.ಗೆ ಏರಿಕೆಯಾಗಲಿದೆ. ಅದೇ ರೀತಿ ಹೌರಾ ನಗರ ಪಾಲಿಕೆಗೂ ಪ್ರತ್ಯೇಕ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಮನೆ ಅಥವಾ ಆವರಣದ ಮಾಲಿಕರಿಗೆ ಸೊಳ್ಳೆ ಹರಡುವುದನ್ನು ತಡೆಗಟ್ಟಲು ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ದಂಡ ವಿಧಿಸಲಾಗುತ್ತದೆ.

loader