ತಾಜ್ ವಿಶ್ವದ 2ನೇ ಅತ್ಯುತ್ತಮ ಪ್ರವಾಸಿ ತಾಣ

First Published 7, Dec 2017, 1:50 PM IST
Taj Mahal Second Best UNESCO World Heritage Site
Highlights

ವಿಶ್ವ ಪ್ರಸಿದ್ಧ ತಾಜ್ ಮಹಲ್, ವಿಶ್ವದ 2ನೇ ಅತ್ಯುತ್ತಮ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎನಿಸಿಕೊಂಡಿದೆ. ಇದು ಭಾರತೀಯರು ಹೆಮ್ಮೆ ಪಡಬೇಕಾದಂತಹ ವಿಚಾರವಾಗಿದೆ.

ನವದೆಹಲಿ(ಡಿ.7): ವಿಶ್ವ ಪ್ರಸಿದ್ಧ ತಾಜ್ ಮಹಲ್, ವಿಶ್ವದ 2ನೇ ಅತ್ಯುತ್ತಮ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಎನಿಸಿಕೊಂಡಿದೆ.

ಪ್ರವಾಸಿ ವೈಬ್ ಸೈಟ್ ಟ್ರಿಪ್ ಅಡ್ವೈಸರ್, ಜಾಗತಿಕವಾಗಿ ಪ್ರವಾಸಿಗರ ಶ್ರೇಯಾಂಕ ಆಧರಿಸಿ ಯುನೆಸ್ಕೋ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳ ತಾಣಗಳ ಪೈಕಿ ಅತ್ಯುತ್ತಮ ಸ್ಥಳಗಳ ಪಟ್ಟಿ ಬಿಡುಗಡೆ ಮಾಡಿದೆ.

ಪ್ರವಾಸಿಗರ ಮೆಚ್ಚುಗೆ ಪಡೆದಿರುವ ಕೊಲಂಬಿಯಾದ ಅಂಕೋರ್ ವಾಟ್ ದೇವಾಲಯ ಮೊದಲ ಸ್ಥಾನದಲ್ಲಿದೆ. ತಾಜ್ ಮಹಲ್ ವಾರ್ಷಿಕ 80 ಲಕ್ಷ ಪ್ರವಾಸಿಗರನ್ನು ನಂತರದ ಸ್ಥಾನ ಪಡೆದಿದೆ. ಗ್ರೇಟ್ ವಾಲ್ ಆಫ್ ಚೀನಾ, ದಕ್ಷಿಣ ಅಮೆರಿಕದ ಮಾಚು ಪೀಚು ಕ್ರಮವಾಗಿ 3ಮತ್ತು 4ನೇ ಸ್ಥಾನ ಪಡೆದಿವೆ.