ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರು ಇನ್ನು ಮುಂದೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಏಕೆಂದರೆ ತಾಜ್‌ಮಹಲ್‌ ಒಳಗಿರುವ ಸಮಾಧಿ ಸ್ಥಳ ಪ್ರವೇಶಕ್ಕೆ ಏ.1ರಿಂದ 200ರು. ಶುಲ್ಕ ವಿಧಿಸುವ ಹೊಸ ಕ್ರಮಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.

ನವದೆಹಲಿ: ತಾಜ್‌ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರು ಇನ್ನು ಮುಂದೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಏಕೆಂದರೆ ತಾಜ್‌ಮಹಲ್‌ ಒಳಗಿರುವ ಸಮಾಧಿ ಸ್ಥಳ ಪ್ರವೇಶಕ್ಕೆ ಏ.1ರಿಂದ 200ರು. ಶುಲ್ಕ ವಿಧಿಸುವ ಹೊಸ ಕ್ರಮಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಜೊತೆಗೆ ಈ ಹಿಂದೆ ತಾಜ್‌ಮಹಲ್‌ ಪ್ರವೇಶಕ್ಕೆ ಇದ್ದ ಶುಲ್ಕವನ್ನು 40 ರು.ನಿಂದ 50ರು. ಗೆ ಹೆಚ್ಚಿಸಲಾಗುತ್ತದೆ. ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಸಂಸ್ಕೃತಿ ಸಚಿವ ಮಹೇಶ್‌ ಶರ್ಮ ತಾಜ್‌ಮಹಲ್‌ನ್ನು ಸಂರಕ್ಷಿಸುವ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿರುವುದೇ ಹೊರತು ಆದಾಯ ಹೆಚ್ಚಿಸುವ ದೃಷ್ಟಿಯಿಂದಲ್ಲ ಎಂದಲ್ಲ ಎಂದು ಹೇಳಿದರು.