ಅಕ್ರಮ ಎಸಗಿದ ತಹಶೀಲ್ದಾರ್ ಅಮಾನತು ಮಾಡಿ ರೋಹಿಣಿ ಸಿಂಧೂರಿ ಆದೇಶ

First Published 9, Apr 2018, 10:17 AM IST
Tahsildar Suspended In Hassan
Highlights

ಬಗರ್ ಹುಕುಂ ಅಕ್ರಮ ಸಕ್ರಮದಲ್ಲಿ ದಾಖಲೆ ತಿದ್ದಿದ ಆರೋಪದ ಅಡಿಯಲ್ಲಿ ಅಕ್ರಮಕ್ಕೆ ಕೈ ಜೋಡಿಸಿದ ಹಿನ್ನೆಲೆಯಲ್ಲಿ  ತಹಶೀಲ್ದಾರ್  ಅಮಾನತು ಮಾಡಲಾಗಿದೆ. ಅಮಾನತು ಪಡಿಸಿ ಇಲಾಖಾ‌ ತನಿಖೆಗೆ ಆದೇಶ ನೀಡಲಾಗಿದೆ. 

ಹಾಸನ : ಬಗರ್ ಹುಕುಂ ಅಕ್ರಮ ಸಕ್ರಮದಲ್ಲಿ ದಾಖಲೆ ತಿದ್ದಿದ ಆರೋಪದ ಅಡಿಯಲ್ಲಿ ಅಕ್ರಮಕ್ಕೆ ಕೈ ಜೋಡಿಸಿದ ಹಿನ್ನೆಲೆಯಲ್ಲಿ  ತಹಶೀಲ್ದಾರ್  ಅಮಾನತು ಮಾಡಲಾಗಿದೆ. ಅಮಾನತು ಪಡಿಸಿ ಇಲಾಖಾ‌ ತನಿಖೆಗೆ ಆದೇಶ ನೀಡಲಾಗಿದೆ. ,

ತಹಶೀಲ್ದಾರ್ ಪ್ರಸನ್ನಮೂರ್ತಿ ಅಮಾನತಿಗೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಿಫಾರಸ್ಸು ಮಾಡಿದ್ದಾರೆ. ಉಸ್ತುವಾರಿ ಸಚಿವ ಮಂಜು ಜೊತೆ ಸೇರಿ ಅಕ್ರಮ ಎಸಗಿದ್ದು, ದಾಖಲೆ ತಿದ್ದಿ ಬಗರ್ ಹುಕುಂ ಯೋಜನೆಯ 1093 ಅರ್ಜಿ ಅನುಮೋದನೆ ಮಾಡಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪ್ರಸನ್ನ ಮೂರ್ತಿ ಅಮಾನತು ಮಾಡಲಾಗಿದೆ.

ಅಕ್ರಮ ಸಕ್ರಮ ಸಾಗುವಳಿ ಯಲ್ಲಿ ಹಳೆ ದಿನಾಂಕಕ್ಕೆ ದಾಖಲೆ ತಿದ್ದಿದ್ದು, ಈ ಸಂಬಂಧ ಚುನಾವಣಾ ಅಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು, ಇದಕ್ಕೆ ತಹಶೀಲ್ದಾರ್ ಉತ್ತರ ನೀಡಿರಲಿಲ್ಲ, ಈ ನಿಟ್ಟಿನಲ್ಲಿ ಅಮಾನತು ಮಾಡಲಾಗಿದ್ದು,ಈಗಾಗಲೇ ಪ್ರಸನ್ನಮೂರ್ತಿ ಸ್ಥಾನಕ್ಕೆ ಬೇರೊಬ್ಬ ತಹಶೀಲ್ದಾರ್ ನಿಯೋಜನೆ ಮಾಡಲಾಗಿದೆ.

loader