ರಾಜಕೀಯಲ್ಲಿ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಇನ್ನೂ ಚೈಲ್ಡ್ (ಮಗು). ಚುನಾವಣೆಯಲ್ಲಿ ಆತನನ್ನು ಸೋಲಿಸಲು ನಮ್ಮಂಥ ಸಾಮಾನ್ಯ ಕಾರ್ಯಕರ್ತರೇ ಸಾಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರವಣ ಹೇಳಿದ್ದಾರೆ.

ಹಾಸನ: ರಾಜಕೀಯಲ್ಲಿ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಇನ್ನೂ ಚೈಲ್ಡ್ (ಮಗು). ಚುನಾವಣೆಯಲ್ಲಿ ಆತನನ್ನು ಸೋಲಿಸಲು ನಮ್ಮಂಥ ಸಾಮಾನ್ಯ ಕಾರ್ಯಕರ್ತರೇ ಸಾಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರವಣ ಹೇಳಿದ್ದಾರೆ.

ಹಾಸನಾಂಬ ತಾಯಿ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಆದೇಶಿಸಿದರೆ ಜಮೀರ್ ವಿರುದ್ಧ ನಾನು ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂದರು. ಯಾವ ಪಕ್ಷದವರನ್ನು ಎಲ್ಲಿಗೆ ಕಳುಹಿಸಬೇಕು ಎಂಬುದನ್ನು ರಾಜ್ಯದ ಜನ 2018 ರಲ್ಲಿ ತೀರ್ಮಾನ ಮಾಡುತ್ತಾರೆ. ಚುನಾವಣೆ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಸೋಮವಾರ ಕೂಡ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶರವಣ, ಹಣಕ್ಕಾಗಿ ವೋಟು ಮಾರಿಕೊಂಡ ನೀಜ ಜಮೀರ್ ಅಹಮದ್ ಎಂದು ಗುಡುಗಿದ್ದರು. ಕಾಂಗ್ರೆಸ್‌ನಲ್ಲಿ ಜಮೀರ್ ಕೊಚ್ಚಿಹೋಗಲಿದ್ದಾರೆ ಎಂದಿದ್ದರು.