ಕನ್ನಡಿಗರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯ ಸರಿಗಮಪ 13 ಗ್ರಾಂಡ್ ಫಿನಾಲೆ ಮುಗಿದು ಅಂತಿಮವಾಗಿ ವಿನ್ನರ್ ಯಾರು ಅನ್ನೋದು ಹೊರಬಿದ್ದಿದೆ. ಅಂತಿಮ ಫಲಿತಾಂಶದ ಬಗ್ಗೆ ಅಸಮಾಧಾನ, ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿದೆ. ನಿಜವಾದ ಪ್ರತಿಭೆಯನ್ನು ಬದಿಗೊತ್ತಿ ವಾಹಿನಿಯ ಟಿಆರ್’ಪಿ ಹಾಗೂ ಅನುಕಂಪದ ಆಧಾರದ ಮೇಲೆ ವಿನ್ನರನ್ನು ಘೊಷಿಸಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು (ಜು.31): ಕನ್ನಡಿಗರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯ ಸರಿಗಮಪ 13 ಗ್ರಾಂಡ್ ಫಿನಾಲೆ ಮುಗಿದು ಅಂತಿಮವಾಗಿ ವಿನ್ನರ್ ಯಾರು ಅನ್ನೋದು ಹೊರಬಿದ್ದಿದೆ. ಅಂತಿಮ ಫಲಿತಾಂಶದ ಬಗ್ಗೆ ಅಸಮಾಧಾನ, ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿದೆ. ನಿಜವಾದ ಪ್ರತಿಭೆಯನ್ನು ಬದಿಗೊತ್ತಿ ವಾಹಿನಿಯ ಟಿಆರ್’ಪಿ ಹಾಗೂ ಅನುಕಂಪದ ಆಧಾರದ ಮೇಲೆ ವಿನ್ನರನ್ನು ಘೊಷಿಸಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನೆ ಗ್ರಾಂಡ್ ಫಿನಾಲೆಯಿದ್ದು ಅಂತಿಮ ಸ್ಪರ್ಧೆಯಲ್ಲಿ ಧನುಶ್, ಸುನೀಲ್, ಶ್ರೀಹರ್ಷ, ದೀಕ್ಷಾ, ಮೆಹಬೂಬ್ ಸಾಬ್, ಶ್ರೀಹರ್ಷ ಮತ್ತು ಅರವಿಂದ್ ಇದ್ದರು. ಸುನೀಲ್ ಮೊದಲ ಸ್ಥಾನ ಪಡೆದರೆ ಮೆಹಬೂಬ್ ಸಾಬ್ ಎರಡನೇ ಸ್ಥಾನ ಹಾಗೂ ಶ್ರೀಹರ್ಷ ಮೂರನೇ ಸ್ಥಾನ ಪಡೆದರು. ಸುನೀಲ್ ಹಾಗೂ ಮೆಹಬೂಬ್’ಕ್ಕಿಂತ ಶ್ರೀಹರ್ಷರನ್ನು ಮೊದಲ ಸ್ಥಾನಕ್ಕೆ ಆಯ್ಕೆ ಮಾಡಬಹುದಾಗಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸುನೀಲ್ ಆರ್ಥಿಕವಾಗಿ ಹಿಂದುಳಿದ್ದದ್ದನ್ನು ಮುಂದಿಟ್ಟುಕೊಂಡು, ಮೆಹಬೂಬ್ ಸಾಬ್ ದೃಷ್ಟಿಹೀನರೆಂಬುದನ್ನು ಮುಂದಿಟ್ಟು ಸಿಂಪಥಿ ಗಿಟ್ಟಿಸಿಕೊಳ್ಳುವುದಕ್ಕಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಬ್ಬರೂ ಉತ್ತಮ ಹಾಡುಗಾರರೆಂಬುದು ನಿಜ. ಅವರಿಗಿಂತ ಶ್ರೀಹರ್ಷ ಇನ್ನೂ ಒಳ್ಳೆಯ ಆಯ್ಕೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
