ತೆರಿಗೆ ಸ್ವರ್ಗ ಎನಿಸಿಕೊಂಡಿರುವ ಸ್ವಿಜರ್‌ಲೆಂಡ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಮಾಹಿತಿ ಮುಂದಿನ ವರ್ಷದ ಜನವರಿ 1ರಿಂದ ಭಾರತಕ್ಕೆ ಲಭ್ಯವಾಗಲಿದೆ.

ನವದೆಹಲಿ (ಡಿ.22): ತೆರಿಗೆ ಸ್ವರ್ಗ ಎನಿಸಿಕೊಂಡಿರುವ ಸ್ವಿಜರ್‌ಲೆಂಡ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಮಾಹಿತಿ ಮುಂದಿನ ವರ್ಷದ ಜನವರಿ 1ರಿಂದ ಭಾರತಕ್ಕೆ ಲಭ್ಯವಾಗಲಿದೆ.

ತೆರಿಗೆ ತಪ್ಪಿಸಲು ವಿದೇಶದಲ್ಲಿಡಲಾಗಿರುವ ಕಪ್ಪು ಹಣದ ವಿರುದ್ಧ ಹೋರಾಟದ ಗುರಿಯೊಂದಿಗೆ, ತೆರಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ಜ.1ರಿಂದ ಸ್ವಯಂಚಾಲಿತವಾಗಿ ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸ್ವಿಜರ್‌ಲೆಂಡ್ ಜತೆ ಭಾರತ ಸಹಿ ಹಾಕಿದೆ.

ಜ.1ರಿಂದ ಜಾಗತಿಕ ಮಾನದಂಡಗಳ ಪ್ರಕಾರ ಮಾಹಿತಿ ಸಂಗ್ರಹಿಸಿ 2019ರ ಸೆಪ್ಟೆಂಬರ್'ನಿಂದ ಪರಸ್ಪರ ಹಂಚಿಕೊಳ್ಳಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ.