ನವದೆಹಲಿ: ತನ್ನ ದೇಶದ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಹಲವು ಗ್ರಾಹಕರ ಪೈಕಿ ಮತ್ತೋರ್ವ ಭಾರತೀಯ ಪೊಟ್ಲುರಿ ರಾಜಮೋಹನ್ ರಾವ್ ಎಂಬುವರಿಗೆ ಸ್ವಿಜರ್‌ಲೆಂಡ್ ಸರ್ಕಾರ ಇದೀಗ ನೋಟಿಸ್ ನೀಡಿದೆ. 

ಇತ್ತೀಚೆಗಷ್ಟೇ 25 ಭಾರತೀಯರಿಗೆ ನೋಟಿಸ್ ನೀಡಿದ್ದ ಸ್ವಿಜರ್ಲೆಂಡ್ ಸರ್ಕಾರ, ಈ ನೋಟಿಸ್ ತಲುಪಿದ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸದಿದ್ದರೆ, ಭಾರತದೊಂದಿಗಿನ ಒಪ್ಪಂದದ ಅನ್ವಯ, ತಮ್ಮ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ನೀಡಲಾಗುವುದು ಎಂದು ಎಚ್ಚರಿಸಿತ್ತು.

ರಾಜಮೋಹನ್ ಅವರ ಜನ್ಮ ದಿನ ಹಾಗೂ ಭಾರತೀಯ ಎಂಬ ವಿಚಾರ ಹೊರತುಪಡಿಸಿ ಬೇರೆ ಮಾಹಿತಿ ಬಹಿರಂಗಪಡಿಸಿಲ್ಲ.