Asianet Suvarna News Asianet Suvarna News

ಗೆಣಸಿನ ಗೆಡ್ಡೆ ಬಿಸ್ಕತ್ತು

ರುಚಿಯಾದ ಕುರುಕಲು ತಿಂಡಿ ತಿನ್ನ ಬೇಕಾ? ಅಂಗಡಿಗೆ ಹೋಗಿ ಕೊಂಡು ತಂದು ತಿಂದು ಆರೋಗ್ಯ ಕೆಡಿಸಿಕೊಳ್ಳ ಬೇಕಿಲ್ಲ. ಬದಲಿಗೆ ಮನೆಯಲ್ಲಿಯೇ ಸಹಿಯಾದ, ರುಚಿಯಾದ, ಹಾಗೂ ಆರೋಗ್ಯಕ್ಕೂ ಒಳ್ಳೆಯದಾದ ಗೆಣಸಿನ ಬಿಸ್ಕತ್ತು ಮಾಡಿ ತಿನ್ನ ಬಹುದು. ಗೆಣಸಿನ ಬಿಸ್ಕತ್ತು ಮಾಡುವ ಬಗೆ ಇಲ್ಲಿದೆ ನೋಡಿ

sweet potato biscuits

ಬೇಕಾಗುವ ಸಾಮಗ್ರಿಗಳು: ಬೇಯಿಸಿ ಅರೆದ ಗೆಣಸು 1 ಕಪ್, ಮಜ್ಜಿಗೆ 1/4 ಕಪ್, ಮೈದಾ ಹಿಟ್ಟು 1 1/2 ಕಪ್, ಬ್ರೌನ್ ಶುಗರ್ 3 ಚಮಚ, ಬೇಕಿಂಗ್ ಪೌಡರ್ 1 1/2 ಚಮಚ, ಬೆಣ್ಣೆ 1/4 ಕಪ್, ಉಪ್ಪು ಸ್ವಲ್ಪ, ಅಡುಗೆ ಸೋಡಾ

 ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಮೈದಾಹಿಟ್ಟು, ಬ್ರೌನ್ ಶುಗರ್, ಬೇಕಿಂಗ್ ಪೌಡರ್, ಅಡುಗೆ ಸೋಡಾ , ಉಪ್ಪ ಹಾಕಿ ಚನ್ನಾಗಿ ಮಿಶ್ರ ಮಾಡಿ. ನಂತರ ಆ ಮಿಶ್ರಣಕ್ಕೆ ಬೆಣ್ಣೆ ಹಾಕಿ ಸರಿಯಾಗಿ ಕಲಸಿ, ಆಗ ಮಿಶ್ರಣ ಸ್ವಲ್ಪ ಗರಿಗರಿಯಾಗುತ್ತದೆ. ನಂತರ ಮತ್ತೊಂದು ಪಾತ್ರೆಗೆ ಅರೆದಿಟ್ಟುಕೊಂಡ ಗೆಣಸು ಚಿಕ್ಕ ಚಿಕ್ಕ ಉಂಡೆ ಮಾಡಿ ಚಪ್ಪಟೆಯಾಗಿ ತಟ್ಟಿ ಅದರ ಮೇಲೆ ಈಗಾಗಲೇ ತಯಾರಿಸಿಟ್ಟುಕೊಂಡ ಹಿಟ್ಟನ್ನು ಹಾಕಿ. ಮತ್ತೆ ಅದರ ಮೇಲೆ ಗಣಸಿನ ಚಪ್ಪಟೆ ಪದರವನ್ನು ಹಾಕಿ ಹೀಗೆ 4 -5 ಪದರಗಳನ್ನು ಮಾಡಿ ರೋಲ್ ಮಾಡಿ ಅದನ್ನು ಸ್ವಲ್ಪ ಚಪ್ಪಟೆ ಮಾಡಿ. ನಂತರ ಅದನ್ನು ಬೇಕಿಂಗ್ ಟ್ರೇಲಿ ಇಟ್ಟು 10 -12 ನಿಮಿಷ ಬೇಯಿಸಿ ತೆಗೆದರೆ ರುಚಿರುಚಿಯಾದ ಗೆಣಸಿನ ಬಿಸ್ಕತ್ತು ಸವಿಯಲು ಸಿದ್ದ.