ಚೆನ್ನೈ(ಸೆ.18): ಕೆಲವು ತಿಂಗಳ ಹಿಂದೆ ದೇಶದಾದ್ಯಂತ ತಲ್ಲಣ ಮೂಡಿಸಿದ್ದ ಇನ್ಫೋಸಿಸ್ ಟೆಕ್ಕಿ ಸ್ವಾತಿ ಹತ್ಯೆಯ ಪ್ರಮುಖ ಆರೋಪಿ ರಾಮ್'ಕುಮಾರ್ ಚೆನ್ನೈನ ಪುಜಲ್'ನ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ.

ಪುಜಲ್'ನ ಕಾರಾಗೃಹದಲ್ಲಿ ಶುಕ್ರವಾರ ವಿದ್ಯುತ್ ಸಂಚಾರವಾಗುತ್ತಿದ್ದ ಕೇಬಲ್'ಅನ್ನು ಸ್ಪರ್ಶಿಸಿದ್ದಾನೆ. ತಕ್ಷಣ ಗಾಯಗೊಂಡ ಈತನನ್ನು ರೋಯಪೇಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಪೊಲೀಸರ ಹೇಳಿಕೆಯ ಪ್ರಕಾರ ವಿದ್ಯುತ್ ಸ್ಪರ್ಶಿಸಿದ ತಕ್ಷಣವೇ ಮೃತಪಟ್ಟಿದ್ದಾನೆ.

ಜೂನ್ 24 ರಂದು ಬೆಳ್ಳಂಬೆಳಗ್ಗೆಯೇ ಚೆನ್ನೈನ ನುನ್ಗಬಕ್ಕಂ ರೈಲ್ವೆ ನಿಲ್ದಾಣದಲ್ಲಿ ಮನೆಗೆ ತೆರಳುತ್ತಿದ್ದ ಇನ್ಫೋಸಿಸ್ ಟೆಕ್ಕಿ ಸ್ವಾತಿಯನ್ನು ಕೊಡಲಿಯಿಂದ ಅಮಾನುಷವಾಗಿ ಹತ್ಯೆ ಮಾಡಿದ್ದ. ಈ ಘಟನೆ ದೇಶದಾದ್ಯಂತ ಸಂಚಲನ ಮೂಡಿಸಿ ಪ್ರತಿಭಟನೆಗಳು ಸಹ ನಡೆದಿದ್ದವು. ನಂತರ ಈತನನ್ನು ಜುಲೈ 1 ರಂದು ಬಂಧಿಸಲಾಗಿತ್ತು.