ನವದೆಹಲಿ[ಜು. 25]  ಸಾಮೂಹಿಕ ಗಲಭೆ ಪ್ರಕರಣಗಳು ಈ ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿಕೊಂಡಿವೆ ಎಂದು ನಟಿ ಸ್ವರಾ ಭಾಸ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಸಾಮೂಹಿಕ ಗಲಭೆ ವಿರುದ್ಧ ದನಿ ಎತ್ತುತ್ತಿರುವ ಕಲಾವಿದರು ಮತ್ತು ಬರಹಗಾರರನ್ನು ಕೊಂಡಾಡಬೇಕು.  ಕಳೆದ 3-4 ವರ್ಷದಿಂದ ಈ ರೀತಿಯ ಪ್ರಕರಣ ಹೆಚ್ಚಿಕೊಂಡಿದೆ ಎಂದರು. ನಾನು ಮಾತನಾಡುತ್ತಾ  ಇದ್ದರೆ ಇಂಥ ಪ್ರಕರಣ ಮತ್ತಷ್ಟು ಹೆಚ್ಚಿಕೊಂಡಿದೆ ಎಂದು ಆತಕ ವ್ಯಕ್ತಪಡಿಸಿದರು.

ನಾನು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಇದ್ದೇನೆ. ಇಲ್ಲಿ ವೈಯಕ್ತಿಕ ಚಿಂತನೆಗಳಿಗೂ ಬೆಲೆ ಇದೆ ಎಂದು ನಟಿ ಹೇಳಿದ್ದಾರೆ.