ಮಹಾರಾಷ್ಟ್ರದ ನಾಂದಣಿಯ  ಜೈನ ಮಠದ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ದುರಂತ ಸಾವು ಕಂಡಿದ್ದಾರೆ.

ಮುಂಬೈ(ಡಿ.22): ಮಹಾರಾಷ್ಟ್ರದ ನಾಂದಣಿಯ ಜೈನ ಮಠದ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ದುರಂತ ಸಾವು ಕಂಡಿದ್ದಾರೆ. ಮಠದಲ್ಲಿ ಸಾಕುತ್ತಿದ್ದ ಆನೆಮರಿ ದಾಳಿಯಿಂದ ಇಲ್ಲಿನ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದಾರೆ. ಸ್ವಾಮೀಜಿ ಆನೆ ಮರಿಗೆ ಮೇವು ನೀಡಲು ಹೋದಾಗ ಸೊಂಡಿಲಿಂದ ಅಪ್ಪಳಿಸಿ ಈ ದುರಂತ ಸಂಭವಿಸಿದೆ.

 ಹಸಿ ಮೇವು ತರಲು ಹೋಗಿದ್ದ ಮಾವುತ ಸಾಕಷ್ಟು ಸಮಯವಾದರೂ ಕೂಡ ಬಾರದ ಕಾರಣ ಮರುಗಿದ ಸ್ವಾಮೀಜಿ, ತಾವೇ ಆನೆಗೆ ಮೇವನ್ನು ನೀಡಲು ಹೋಗಿದ್ದಾರೆ.

ಈ ವೇಳೆ ಕೋಪಗೊಂಡಿದ್ದ ಆನೇ ಮರಿ ಸೊಂಡಿಲಿನಲ್ಲಿ ಹಿಡಿದುಕೊಂಡು ಮೂರು-ನಾಲ್ಕು ಭಾರಿ ಅಪ್ಪಳಿಸಿದೆ. ಇದರಿಂದ ಸ್ವಾಮೀಜಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ.