ವಿವೇಕಾನಂದ ಅಮೇರಿಕಾದಲ್ಲಿ ಗೊತ್ತಿದ್ದೇ ಗೋಮಾಂಸ ತಿಂದಿದ್ದರು. ಗೋ ಮಾಂಸ ಸೇವಿಸಿದ್ದ ವಿವೇಕಾನಂದರು ಇಂದು ಇರುತ್ತಿದ್ದರೆ ಎರಡೇ ಸೆಕೆಂಡಿನಲ್ಲಿ ಕೊಲೆಯಾಗುತ್ತಿದ್ದರು ಎಂದು ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು : ರಾಮಾಯಣವನ್ನು ಬ್ರಾಹ್ಮಣೀಕರಣ ಮಾಡಲಾಗಿದ್ದು ರಾಮನನ್ನು ದೇವರೆಂದು ಬಿಂಬಿಸುವ ವಿತಂಡವಾದ ವಿಜೃಂಭಿಸುತ್ತಿದೆ. ಗೋ ಮಾಂಸ ಸೇವಿಸಿದ್ದ ವಿವೇಕಾನಂದರು ಇಂದು ಇರುತ್ತಿದ್ದರೆ ಎರಡೇ ಸೆಕೆಂಡಿನಲ್ಲಿ ಕೊಲೆಯಾಗುತ್ತಿದ್ದರು ಎಂದು ದೇಸೀ ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರದಂದು ನಗರದ ಎಂಜಿಎಂ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಹೇರಾಮ್.. ರಾಮಾಯಣ ಸಂವಾದ’ದಲ್ಲಿ ಮಾತನಾಡಿದ ಅವರು, ವಿವೇಕಾನಂದ ಅಮೇರಿಕಾದಲ್ಲಿ ಗೊತ್ತಿದ್ದೇ ಗೋಮಾಂಸ ತಿಂದಿದ್ದರು ಎಂದು ಹೇಳಿದರು.
ರಾಮನನ್ನು ಮನುಷ್ಯರಿಂದ ದೂರ ಇಡುವುದೇ ತಪ್ಪು. ರಾಮ ನಮ್ಮ ನಿಮ್ಮಂತ ಮನುಷ್ಯ. ರಾಮರಾಜ್ಯ ಅಂದ್ರೆ ಗ್ರಾಮ ರಾಜ್ಯಆಗಬೇಕು. ಆದರೆ ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಹುನ್ನಾರ ಎಬ್ಬಿಸುತ್ತಾರೆ ಎಂದರು. ಇದೇವೇಳೆ ಆಂಜನೇಯ ಬಹಳ ಸಭ್ಯ ಮನುಷ್ಯ. ರಾಮನಿಗಿಂತ ಸಭ್ಯ ಮನುಷ್ಯ. ಆದರೆ ಆತನಿಗೆ ರಾಕ್ಷಸ ಸ್ವರೂಪವನ್ನು ಕೊಡಲಾಗಿದೆ. ಯಾರನ್ನೋ ಬಲಿ ಕೊಡಲು ಆತನನ್ನು ಭಜರಂಗಬಲಿಯಾಗಿ ನೇಮಿಸಲಾಗಿದೆ. ಭಜರಂಗದಳದ ಯುವಕರಿಗೆ ಮುಸಲ್ಮಾನರನ್ನು ಹೊಡೆಯುವುದೇ ಐಡೆಂಟಿಟಿ ಎಂದು ಅಭಿಪ್ರಾಯಪಟ್ಟರು.
ರಾಹುಲ್ ಸತ್ಯ ಹೇಳಿದ್ರೂ ಜನ ನಂಬೊಲ್ಲ: ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸತ್ಯ ಹೇಳಿದರೂ ನಗೆಪಾಟಲಿಗೆ ಒಳಗಾಗ್ತಿದ್ದಾರೆ. ರಾಹುಲ್ ಹಿಂದೆ ನಿಂತಿರುವ ಡಿಕೆಶಿ, ಸಿದ್ದರಾಮಯ್ಯನನ್ನು ಜನ ನಂಬಲ್ಲ. ಹಾಗಾಗಿ ರಾಹುಲ್ ಗಾಂಧಿ ಮೇಲೆ ಜನಕ್ಕೆ ನಂಬಿಕೆ ಬರುತ್ತಿಲ್ಲ ಎಂದು ಚಿಂತಕ ಪ್ರಸನ್ನ ಅವರು ಹೇಳಿದರು. ಇದೇವೇಳೆ ಪ್ರಧಾನಿ ನರೇಂದ್ರ ಮೋದಿ ಅಂತೂ ಸುಳ್ಳನ್ನು ಸತ್ಯದ ತಲೆಗೆ ಹೊಡೆದಂತೆ ಮಾತನಾಡ್ತಾರೆ. ಬುದ್ಧಿಜೀವಿಗಳು ಮಾತ್ರ ಕೋಣೆಯೊಳಗೆ ಇದ್ದೇವೆ. ಬೀದಿಗೆ ಬಂದು ಪ್ರಾಣ ಹೋದರೂ ಪರವಾಗಿಲ್ಲ ಸತ್ಯ ಹೇಳೋಣ ಎಂದರು.
