ವಿಶೇಷವೆಂದರೆ, ಈ ಅಭಿಯಾನವು ಕೇವಲ ಸಾಂಕೇತಿಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ವಾರ್ಡ್'ನಲ್ಲೂ ಸೋಮವಾರ ಸ್ವಚ್ಛತಾ ಕಾರ್ಯ ನಡೆಯಲಿದೆ. ಬೆಂಗಳೂರಿನ ಯಾವುದೇ ಪ್ರಜೆಯೂ ತಾನಿರುವ ಪ್ರದೇಶದಲ್ಲೇ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರು: ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಫೌಂಡೇಶನ್, ಯುನೈಟೆಡ್ ಬೆಂಗಳೂರು ಮೊದಲಾದ ಸ್ವಯಂಸೇವಾ ಸಂಸ್ಥೆಗಳು ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಿವೆ. ಅಕ್ಟೋಬರ್ 2, ಸೋಮವಾರ ಗಾಂಧಿ ಜಯಂತಿಯಂದು ಈ ಮಹಾ ಸ್ವಚ್ಛಾ ಕಾರ್ಯ ನಡೆಯಲಿದೆ. ವಿಶೇಷವೆಂದರೆ, ಈ ಅಭಿಯಾನವು ಕೇವಲ ಸಾಂಕೇತಿಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ವಾರ್ಡ್'ನಲ್ಲೂ ಸೋಮವಾರ ಸ್ವಚ್ಛತಾ ಕಾರ್ಯ ನಡೆಯಲಿದೆ. ಬೆಂಗಳೂರಿನ ಯಾವುದೇ ಪ್ರಜೆಯೂ ತಾನಿರುವ ಪ್ರದೇಶದಲ್ಲೇ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರಿನ 72 ವಾರ್ಡ್'ಗಳಲ್ಲಿ ಸೋಮವಾರ ಸಾವಿರಾರು ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ನಗರದ 9 ಕೆರೆಗಳನ್ನು ಅಂದು ಸ್ವಚ್ಛಗೊಳಿಸಲಾಗುತ್ತಿದೆ. ಬೆಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಜನಾಂದೋಲನವಾಗಿದೆ. ಹಿಂದೆಂದೂ ಈ ಪರಿಯಲ್ಲಿ ಜನರಿಂದ ನಗರ ಸ್ವಚ್ಛತೆ ಕಾರ್ಯ ಆಗಿದ್ದಿಲ್ಲ.

ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಅಪರಿಮಿತ ಆಸಕ್ತಿಯಲ್ಲಿ ನಡೆಯುತ್ತಿರುವ ಈ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ನೀವು ಹೇಗೆ ಮತ್ತು ಎಲ್ಲಿ ಪಾಲ್ಗೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ...

ರಾಹುಲ್ ಗುಜ್ಜರ್: 9986130353
ಅನಿರುದ್ಧ್ ಎಸ್ ದತ್: 7019104197

ಅಥವಾ ಇಲ್ಲಿ ಕ್ಲಿಕ್ ಮಾಡಿ. https://goo.gl/o1aLy3

ಹೆಚ್ಚಿನ ಮಾಹಿತಿಗಾಗಿ #UnitedBengaluru ಫೇಸ್ಬುಕ್ ಪುಟವನ್ನು ನೋಡಿ.

ನಿಮ್ಮ ಸ್ನೇಹಿತರು, ಕುಟುಂಬ ಹಾಗು ಮಕ್ಕಳನ್ನು ಈ ಅಭಿಯಾನಕ್ಕೆ ಜೋಡಿಸಿ. ನಮ್ಮ ನಗರವನ್ನು ರಕ್ಷಿಸುವ ನಾಗರೀಕರಾಗಿ ಈ ಗಾಂಧಿ ಜಯಂತಿಯನ್ನು ಒಟ್ಟಾಗಿ ಆಚರಿಸಿರಿ.