Asianet Suvarna News Asianet Suvarna News

ಮೋದಿ ಬೆಂಗಳೂರು ಸಮಾವೇಶದ ನಂತರ ಅರಮನೆ ಮೈದಾನದಲ್ಲಿ ಏನಾಯ್ತು?

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಭಾಷಣ ಮಾಡಿ ತೆರಳಿದರು. ಆದರೆ ಭಾಷಣದ ನಂತರ ನಡೆದ ಒಂದು ಸಂಗತಿ ಮಾತ್ರ ನಿಜಕ್ಕೂ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತದೆ.

Swachh Bharat Inspirational work by Young Bengalureans after Narendra Modi campaign
Author
Bengaluru, First Published Apr 14, 2019, 11:35 PM IST

ಬೆಂಗಳೂರು[ಏ. 14] ಬೆಂಗಳೂರಿಗೆ ಶನಿವಾರ ಬಂದಿದ್ದ ಪ್ರಧಾನಿ ಮೋದಿ ಬಿಜೆಪಿ ಪರ ಮತಯಾಚನೆ ಮಾಡಿದರು. ಅರಮನೆ ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಸಾವಿರಾರು ಜನ ಸಾಕ್ಷಿಯಾಗಿಯೂ ಇದ್ದರು. ಆದರೆ ಸಮಾವೇಶ ಮುಗಿದ ನಂತರದ ಸುದ್ದಿಯೊಂದನ್ನು ಓದಿ ತಿಳಿದುಕೊಳ್ಳಲೇಬೇಕಿದೆ. 

ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತವಾದ ಯುವಕರ ತಂಡವೊಂದು ಸದ್ದಿಲ್ಲದೆ ತನ್ನ ಕೆಲಸ ಮಾಡತೊಡಗಿದೆ. ಸಮಾವೇಶ ಮುಗಿದ ನಂತರ ಕಸಗಳನ್ನು ಆಯ್ದು ಸ್ವಚ್ಛ ಮಾಡಿದೆ. ಈ ವೇಳೆ ಸ್ಥಳಕ್ಕೆ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಬಂದಿದ್ದಾರೆ. ಯುವಕರ ಕೆಲಸ ಗಮನಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಮೋದಿ ಸಮಾವೇಶದಲ್ಲಿ ಅಂದು ವೇದಿಕೆ, ಇಂದು ಲಾಸ್ಟ್ ಬೆಂಚ್!

ಒಟ್ಟಿನಲ್ಲಿ ಸಮಾವೇಶದ ನಂತರ ಸ್ವಯಂಪ್ರೇರಿತವಾಗಿ ಕಸ ಆಯ್ದ ತಂಡಕ್ಕೆ ನಮ್ಮ ಕಡೆಯಿಂದಲೂ ಅಭಿನಂದನೆ. ಇಂಥ ಮಾದರಿ ಕೆಲಸಗಳು ಹೆಚ್ಚಾಗಲಿ, ಪ್ರತಿಯೊಬ್ಬರೂ ಈ ಬಗೆಯ ಆಲೋಚನೆ ಬೆಳೆಸಿಕೊಂಡರೆ ನಮಗೆ ನಾವೇ ಹೇಳಿಕೊಂಡಂತೆ ವಂದನೆ.

"

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios