ನಿಮ್ಮ ಬಜೆಟ್‌, ನಿಮ್ಮ ನಿರ್ಧಾರ: ನಿವೇಶನ, ಮನೆ ಕೊಳ್ಳುವವರು ಮೊದಲು ತಮ್ಮ ಬಜೆಟ್‌ನಲ್ಲಿ ಎಲ್ಲಿ ಮನೆ ಸಿಗುತ್ತದೆ ಎಂದು ಹುಡುಕುತ್ತಿರುತ್ತಾರೆ. ಇದಕ್ಕಾಗಿ ಸಾಕಷ್ಟುಕಡೆ ಕೇಳಿ ಕೇಳಿ ಕೊನೆಗೆ ಇದೇ ಸ್ಥಳವೆಂಬ ಆಯ್ಕೆ ಮಾಡುತ್ತಾರೆ. ಆದರೆ ಹಲವು ಬಾರಿ ಗ್ರಾಹಕರಿಗೆ ತಮ್ಮಿಷ್ಟದ ಪ್ರದೇಶದಲ್ಲಿ ತಮಗನುಕೂಲಕರವಾದ ಕಡೆ ತಮ್ಮ ಬಜೆಟ್‌ಗೆ ತಕ್ಕ ಮನೆ /ನಿವೇಶನ ಸಿಗದೇ ನಿರಾಶರಾಗುತ್ತಾರೆ. ಆದರೆ ಪ್ರಾಪರ್ಟಿ ಎಕ್ಸ್‌ಪೋಗಳು ಗ್ರಾಹಕರಿಗೆ ಈ ನಿರಾಶೆಗೆ ಅವಕಾಶ ಮಾಡುವುದಿಲ್ಲ. ಬೆಂಗಳೂರಿನಲ್ಲಿ ನಿವೇಶನ/ಮನೆ ಖರೀದಿ ಕೇವಲ ವಾಸಿಸುವುದಕ್ಕಾಗಿ ಮಾತ್ರವಲ್ಲದೇ ಅಷ್ಟೇ ಪ್ರಮಾಣದ ಹೂಡಿಕೆ ಆಗಿಯೂ ಪರಿಗಣಿತವಾಗುತ್ತದೆ.
ಬೆಂಗಳೂರಿನಲ್ಲಿ ಆಸ್ತಿ(ಪ್ರಾಪರ್ಟಿ) ಬೆಲೆ ಇಳಿಕೆ ಆಗಿದೆಯೋ ಅಥವಾ ಏರಿಕೆ ಆಗಿದೆಯೋ ಎಂಬ ಚರ್ಚೆ ಎಲ್ಲಡೆ ಕೇಳಿ ಬರುತ್ತಿದೆ. ನೋಟು ಅಮಾನ್ಯದ ಬಳಿಕ ಆಸ್ತಿ ಬೆಲೆಯಲ್ಲಿ ಭಾರೀ ಇಳಿಕೆ ಆಗಲಿದೆ ಎಂದು ನಿರೀಕ್ಷಿಸಿದ್ದವರಿಗೆ ಶುಭ ಸುದ್ದಿ ಕಾದಿದೆ. ಬೆಂಗಳೂರಿನ ಬಹುಭಾಗಗಳಲ್ಲಿ ಪ್ರಾಪರ್ಟಿ ಬೆಲೆ ಇಳಿಕೆ ಆಗಿದ್ದು ಇದೇ ಸಂದರ್ಭದಲ್ಲಿ ಸುವರ್ಣನ್ಯೂಸ್ ‘ನಮ್ಮ ಮನೆ' ಪ್ರಾಪರ್ಟಿ ಎಕ್ಸ್ಪೋ ಕೂಡ ಆಯೋಜಿತವಾಗುತ್ತಿದ್ದು ಹೂಡಿಕೆಗೂ ಇದು ಸಕಾಲವಾಗಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ವಿದ್ಯಮಾನಗಳು ಪ್ರಸ್ತುತ ಬೆಲೆ ಏರಿಳಿತ ಇವುಗಳ ಕುರಿತ ಅಧ್ಯಯನವೊಂದರ ಅಂಕಿ ಅಂಶದಂತೆ ಬೆಂಗಳೂರಿನ 254 ಭಾಗಗಳಲ್ಲಿ ಪ್ರಾಪರ್ಟಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹಾಗೆಂದು ಬೆಲೆ ಏರಿಕೆಯೂ ಒಟ್ಟು 251 ಕಡೆಗಳಲ್ಲಿ ಕಂಡು ಬರುತ್ತಿದ್ದರೂ ಇಳಿಕೆ ಮತ್ತು ಏರಿಕೆ ಪ್ರಮಾಣಕ್ಕೆ ಮಾಡಿದ ಹೋಲಿಕೆ ಪ್ರಕಾರ ಇಳಿಕೆಯೇ ಹೆಚ್ಚಾಗಿದೆ. ಬೆಂಗಳೂರಿಗರು ಹೊಸ ಆಸ್ತಿ ಖರೀದಿ ಇಲ್ಲಾ ಆಸ್ತಿ ಮಾರಾಟಕ್ಕಾಗಿ ಮಾರುಕಟ್ಟೆಯ ವಿದ್ಯಮಾನಗಳ ಕಡೆಗೆ ನೋಟ ನೆಟ್ಟಿರುತ್ತಾರೆ. ನೋಟು ಅಮಾನ್ಯವು ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ತಳಮಳ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದ್ದರೂ ಇದೀಗ ಎಲ್ಲವೂ ಮುಗಿದು ಒಂದು ರೀತಿಯ ತಟಸ್ಥ ವಾತಾವರಣವಿದೆ. ಮಾರಾಟ, ಖರೀದಿ ಎಲ್ಲವೂ ಮತ್ತೆ ಹಳಿಗೆ ಬಂದಿದ್ದು ವ್ಯವಹಾರ ಮತ್ತೆ ಎಂದಿನ ಗತಿಗೆ ಮರಳಿದೆ. ಹೀಗಾಗಿ ಹೂಡಿಕೆಗಾರರು ಇನ್ನೂ ಇಳಿಕೆಯ ನಿರೀಕ್ಷೆ ಮಾಡದೇ ಮತ್ತೆ ಪ್ರಾಪರ್ಟಿ ಬೆಲೆ ಏರುಮುಖವಾಗುವ ಮುನ್ನವೇ ಖರೀದಿ ಮಾಡುವುದು ಉತ್ತಮ ಎಂದು ರಿಯಲ್ ಎಸ್ಟೇಟ್ ವಲಯದ ತಜ್ಞರು ಅಭಿಪ್ರಾಯಪಡುತ್ತಾರೆ.
ನಿಮ್ಮ ಬಜೆಟ್, ನಿಮ್ಮ ನಿರ್ಧಾರ: ನಿವೇಶನ, ಮನೆ ಕೊಳ್ಳುವವರು ಮೊದಲು ತಮ್ಮ ಬಜೆಟ್ನಲ್ಲಿ ಎಲ್ಲಿ ಮನೆ ಸಿಗುತ್ತದೆ ಎಂದು ಹುಡುಕುತ್ತಿರುತ್ತಾರೆ. ಇದಕ್ಕಾಗಿ ಸಾಕಷ್ಟುಕಡೆ ಕೇಳಿ ಕೇಳಿ ಕೊನೆಗೆ ಇದೇ ಸ್ಥಳವೆಂಬ ಆಯ್ಕೆ ಮಾಡುತ್ತಾರೆ. ಆದರೆ ಹಲವು ಬಾರಿ ಗ್ರಾಹಕರಿಗೆ ತಮ್ಮಿಷ್ಟದ ಪ್ರದೇಶದಲ್ಲಿ ತಮಗನುಕೂಲಕರವಾದ ಕಡೆ ತಮ್ಮ ಬಜೆಟ್ಗೆ ತಕ್ಕ ಮನೆ /ನಿವೇಶನ ಸಿಗದೇ ನಿರಾಶರಾಗುತ್ತಾರೆ. ಆದರೆ ಪ್ರಾಪರ್ಟಿ ಎಕ್ಸ್ಪೋಗಳು ಗ್ರಾಹಕರಿಗೆ ಈ ನಿರಾಶೆಗೆ ಅವಕಾಶ ಮಾಡುವುದಿಲ್ಲ. ಬೆಂಗಳೂರಿನಲ್ಲಿ ನಿವೇಶನ/ಮನೆ ಖರೀದಿ ಕೇವಲ ವಾಸಿಸುವುದಕ್ಕಾಗಿ ಮಾತ್ರವಲ್ಲದೇ ಅಷ್ಟೇ ಪ್ರಮಾಣದ ಹೂಡಿಕೆ ಆಗಿಯೂ ಪರಿಗಣಿತವಾಗುತ್ತದೆ.
ಕೇವಲ ಬೆಂಗಳೂರಿಗರು ಮಾತ್ರವಲ್ಲ ರಾಜ್ಯದ ವಿವಿಧೆಡೆಯಿಂದ, ಹೊರ ರಾಜ್ಯಗಳವರೂ ಬೆಂಗಳೂರಿನಲ್ಲಿ ಪ್ರಾಪರ್ಟಿ ಮಾಡುವ ಇರಾದೆ ಇದ್ದೇ ಇರುತ್ತದೆ. ಕೆಲವರು ಬಜೆಟ್ ಮನೆ ನಿವೇಶನ ಹುಡುಕುತ್ತಿದ್ದರೆ ಹಲವರು ಹೂಡಿಕೆಗೆ ಪ್ರಶಸ್ತ ಸ್ಥಳದ ಹುಡುಕಾಟದಲ್ಲಿರುತ್ತಾರೆ. ಹೀಗಾಗಿ‘ನಮ್ಮ ಮನೆ' ಪ್ರಾಪರ್ಟಿ ಎಕ್ಸ್ಪೋ ಎರಡು ಬಗೆಯ ಗ್ರಾಹಕರಿಗೆ ಹೇಳಿ ಮಾಡಿಸಿದಂತಿದೆ.
ಬೆಂಗಳೂರು ಬೆಳವಣಿಗೆ: ಬೆಂಗಳೂರು ದಶದಿಕ್ಕುಗಳಲ್ಲೂ ಬೆಳವಣಿಗೆ ಆಗುತ್ತಿದೆ. ಈ ಬೆಳವಣಿಗೆಯ ಜತೆಗೆ ಮೂಲಸೌಕರ್ಯ ಗಳೂ ನಿರ್ಮಾಣವಾಗುತ್ತಿವೆ. ನಮ್ಮ ಮೆಟ್ರೋ ವಿಸ್ತರಣೆ ಜತೆಗೆ ರಸ್ತೆಗಳು, ಸಾರ್ವಜನಿಕ ಸಂಪರ್ಕ ಸಾರಿಗೆ ಹೀಗೆ ಜನ ಸಂಚಾರಕ್ಕೆ ಸೌಲಭ್ಯಗಳೂ ವಿಸ್ತರಣೆಗೊಳ್ಳು ತ್ತಿವೆ. ನಗರದ ಯಾವುದೇ ಭಾಗವನ್ನು ಎಷ್ಟೇ ಹೊತ್ತಿನಲ್ಲೂ ತಲುಪಬಹುದಾ ದಂತಹ ವ್ಯವಸ್ಥೆ ಇದ್ದು ಬೆಳೆಯುತ್ತಿರುವ ಬೆಂಗಳೂರು ಪ್ರಾಪರ್ಟಿ ಖರೀದಿ ಮಾರಾ ಟಕ್ಕೆ ಅತ್ಯಂತ ಪ್ರಶಸ್ತವೂ ಆಗಿದೆ.
ಬೆಂಗಳೂರು ದೇಶದಲ್ಲೇ ಎರಡನೆ ಅತಿ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ 2013ರಲ್ಲೇ ಹೊರಹೊಮ್ಮಿದ್ದು ಹೀಗಾಗಿ ಹೂಡಿಕೆಗೂ ಹೇಳಿ ಮಾಡಿಸಿ ದಂತಿದೆ. ಸುವರ್ಣ ನ್ಯೂಸ್ ಎಕ್ಸ್ಪೋ ಇದಕ್ಕೊಂದು ಉತ್ತಮ ವೇದಿಕೆಯಾಗಿದ್ದು ಬೆಂಗಳೂರಿನಲ್ಲೊಂದು ನಿವೇಶನ/ಮನೆ/ಹೂಡಿಕೆಯ ಎಲ್ಲ ಆಯ್ಕೆಗಳಿಗೂ ವಿಪುಲ ಅವಕಾಶಗಳನ್ನು ತೆರೆದಿಡಲಿದೆ.
