ಮೇ 20ರಿಂದಲೇ ಪ್ರವೇಶ ಸ್ವೀಕರಿಸಲಾಗುತ್ತಿದೆ. ಪ್ರವೇಶ ಕಳುಹಿಸಲು ಜೂನ್ 11 ಕೊನೆಯ ದಿನಾಂಕವಾಗಿದೆ. ಜೂನ್ 23ರಂದು ನಗರದ ಟೌನ್'ಹಾಲ್'ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬೆಂಗಳೂರು: ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಸಾಹಸ ಪ್ರವೃತ್ತಿ ಮೂಡಿಸಲು, ಸಾಹಸೀ ಮಕ್ಕಳ ಉತ್ಸಾಹ ಹೆಚ್ಚಿಸುವ ಸಲುವಾಗಿ ಸುವರ್ಣನ್ಯೂಸ್ "ಶೌರ್ಯ ಪ್ರಶಸ್ತಿ" ಎಂಬ ಹೊಸ ಕಾರ್ಯಕ್ರಮ ಆಯೋಜಿಸಿದೆ. ಕಠಿಣ ಪರಿಸ್ಥಿತಿಯಲ್ಲಿ ಧೈರ್ಯ, ಸಾಹಸ ಮೆರೆದು ತಮ್ಮ ಜೀವ ಪಣಕ್ಕಿಟ್ಟು ಮತ್ತೊಬ್ಬರ ಪ್ರಾಣ ರಕ್ಷಿಸಿದ ಜನರನ್ನು ಗುರುತಿಸಿ ಸನ್ಮಾನಿಸಲು ಸುವರ್ಣನ್ಯೂಸ್ ಈ ಕಾರ್ಯಕ್ಕೆ ಕೈಹಾಕಿದೆ. ನೀವೇ ಆ ಸಾಹಸಿಗರಾಗಿದ್ದರೆ, ಅಥವಾ ಅಂಥ ಸಾಹಸಿಗರು ನಿಮಗೆ ಗೊತ್ತಿದ್ದರೆ ಕೂಡಲೇ ಸುವರ್ಣನ್ಯೂಸ್'ಗೆ ಪ್ರವೇಶಗಳನ್ನು ಕಳುಹಿಸಿ. ಮೇ 20ರಿಂದಲೇ ಪ್ರವೇಶ ಸ್ವೀಕರಿಸಲಾಗುತ್ತಿದೆ. ಪ್ರವೇಶ ಕಳುಹಿಸಲು ಜೂನ್ 11 ಕೊನೆಯ ದಿನಾಂಕವಾಗಿದೆ. ಜೂನ್ 23ರಂದು ನಗರದ ಟೌನ್'ಹಾಲ್'ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ವಿಳಾಸಕ್ಕೆ ನೀವು ಪ್ರವೇಶ ಕಳುಹಿಸಬಹುದು:
'ಶೌರ್ಯ ಪ್ರಶಸ್ತಿ" ವಿಭಾಗ; ಸುವರ್ಣನ್ಯೂಸ್, ನಂ. 36, ಕ್ರೆಸೆಂಟ್ ರಸ್ತೆ, ಬೆಂಗಳೂರು-560001.
ಸಂಪರ್ಕ ಸಂಖ್ಯೆ: +91 7892181851
ಇಮೇಲ್: sp2017@suvarnanews.in
