ಶಾಸಕ ಕೆ.ಶಿವಮೂರ್ತಿ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಯ ಸದಸ್ಯರು ಮೇ 12ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿತ್ತು.

ಬೆಂಗಳೂರು(ಮೇ 04): ಬರದ ನಡುವೆಯೂ ಉತ್ತರಭಾರತಕ್ಕೆ ಹೊರಟಿದ್ದ ರಾಜ್ಯದ ಶಾಸಕರ ಪ್ರವಾಸಕ್ಕೆ ಸದ್ಯಕ್ಕೆ ತಡೆಬಿದ್ದಿದೆ. ಶಾಸಕರ ಪ್ರವಾಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಧಿವೇಶನದವರೆಗೂ ಯಾವ ಶಾಸಕರನ್ನೂ ಪ್ರವಾಶಕ್ಕೆ ಕಳುಹಿಸುತ್ತಿಲ್ಲ. ಅಧಿವೇಶನದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ಸುವರ್ಣನ್ಯೂಸ್ ಸತತವಾಗಿ ಶಾಸಕರ ಪ್ರವಾಸದ ಕುರಿತು ವರದಿ ಪ್ರಸಾರ ಮಾಡುತ್ತಲೇ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಶಾಸಕರ ಪ್ರವಾಸ?
ಅಧೀನ ಶಾಸನ ರಚನಾ ಸಮಿತಿಯ ತಂಡ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿ ಸದಸ್ಯರು ಪ್ರತ್ಯೇಕವಾಗಿ ಪ್ರವಾಸ ಕೈಗೊಳ್ಳಲು ನಿರ್ಧಾರವಾಗಿತ್ತು. ಅಧೀನ ಶಾಸನ ರಚನಾ ಸಮಿತಿಯಲ್ಲಿ 14 ವಿಧಾನಸಭಾ ಸದಸ್ಯರು, 4 ವಿಧಾನಪರಿಷತ್ ಸದಸ್ಯರಿದ್ದಾರೆ. ಈ ತಂಡವು ಮೇ 9-16ರವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ಅಧ್ಯಯನದ ಪ್ರವಾಸ ಕೈಗೊಳ್ಳಲಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ತಂಡದಲ್ಲಿದ್ದಾರೆ.

ಇನ್ನು, ಶಾಸಕ ಕೆ.ಶಿವಮೂರ್ತಿ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಯ ಸದಸ್ಯರು ಮೇ 12ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿತ್ತು.

ಅಧೀನ ಶಾಸನ ರಚನಾ ಸಮಿತಿ ಸದಸ್ಯ ಶಾಸಕರ ಪಟ್ಟಿ:
ಸಿದ್ದು ಬಿ ನ್ಯಾಮಗೌಡ,
ರಾಜಶೇಖರ್​ ಬಸವರಾಜ ಪಾಟೀಲ್​,
ಎ.ಎಸ್.ಪಾಟೀಲ್​ ನಡಹಳ್ಳಿ,
ದಿನೇಶ್​ ಗುಂಡೂರಾವ್,
ಜಿ.ಹಂಪಯ್ಯ ಸಾಹುಕಾರ ಬಲ್ಲಟಗಿ,
ಎಂ.ಕೆ.ಸೋಮಶೇಖರ್​,
ಬಿ.ಸುರೇಶ್​ಗೌಡ,
ಬಿ.ಎನ್​.ವಿಜಯಕುಮಾರ್​,
ಬಿ.ಝಡ್​.ಜಮೀರ್​ ಅಹ್ಮದ್​ ಖಾನ್​,
ಹಾಲಾಡಿ ಶ್ರೀನಿವಾಸ ಶೆಟ್ಟಿ,
ಕೆ.ಬಿ.ಪ್ರಸನ್ನಕುಮಾರ್​,
ಕೆ.ಬಿ.ಶಾಣಪ್ಪ,
ಸೋಮಣ್ಣ ಎಂ.ಬೇವಿನಮರದ,
ಎಂ.ನಾರಾಯಣಸ್ವಾಮಿ,
ಕಾಂತರಾಜ್​ ಬಿಎಂಎಲ್​