ಬೆಂಗಳೂರು ನಗರ ಮಾತ್ರವಲ್ಲ ಸುತ್ತ ಮುತ್ತಲ ಬಿಡದಿ, ಮೈಸೂರು ರಸ್ತೆ, ನೆಲಮಂಗಲಗಳ ಸುತ್ತಮುತ್ತಲ ಪ್ರದೇಶಗಳಲ್ಲೂ ಕೈಗೆಟಕುವ ದರಗಳಲ್ಲಿ ಸಾವಿರಾರು ನಿವೇಶನಗಳನ್ನು ಕೊಳ್ಳುವ ಅವಕಾಶ ಎಕ್ಸ್‌'ಪೋದಲ್ಲಿದೆ.
ಬೆಂಗಳೂರು(ಮಾ. 04): ನಿವೇಶನಗಳು ಕೇವಲ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾತ್ರವಲ್ಲ ನಿವೇಶನ ಕೊಳ್ಳುವವರಿಗೆ 2-5 ಗ್ರಾಂ ಚಿನ್ನದ ಉಡುಗೊರೆಯೂ ಸಿಗುತ್ತೆ. ಬೆಲೆಯಲ್ಲಿ ಚೌಕಾಸಿಗೂ ಅವಕಾಶ. ಸ್ಥಳದಲ್ಲೇ ಸಾಲವೂ ಲಭ್ಯ. ಆಕರ್ಷಕ ಶೂನ್ಯ ಬಡ್ಡಿದರದ ಸಾಲದ ಕಂತುಗಳು, ನಿವೇಶನ ಖರೀದಿಸುವ ಅಥವಾ ಮನೆ ಕೊಳ್ಳುವವರಿಗೆ ಬಂಪರ್ ಬಹುಮಾನ, ಕಾರು ಗೆಲ್ಲುವ ಅವಕಾಶ...
- ಹೀಗೆ ಹತ್ತಾರು ಆಕರ್ಷಕ ಕೊಡುಗೆಗಳ ಮಹಾಪೂರದೊಂದಿಗೆ ಸುವರ್ಣ ನ್ಯೂಸ್ ‘ನಮ್ಮ ಮನೆ' ಪ್ರಾಪರ್ಟಿ ಎಕ್ಸ್'ಪೋಗೆ ಶುಕ್ರವಾರ ಚಾಲನೆ ದೊರೆತಿದೆ.
ಬೆಂಗಳೂರು ಅರಮನೆಯ ಜಯಮಹಲ್ ಪ್ಯಾಲೇಸ್ ಹೊಟೇಲ್ ಆವರಣದಲ್ಲಿ ಭಾನುವಾರದವರೆಗೆ ಎಕ್ಸ್'ಪೋ ನಡೆಯಲಿದ್ದು ಮೊದಲ ದಿನವೇ ಸಾಕಷ್ಟು ಬಿಲ್ಡರ್-ಡೆವಲಪರ್'ಗಳು ತಮ್ಮ ಯೋಜನೆಗಳ ನಿವೇಶನ-ಮನೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟ ಮಾಡಿದ್ದಾರೆ. ಬೆಂಗಳೂರು ನಗರ ಮಾತ್ರವಲ್ಲ ದೂರದ ಮೈಸೂರು, ದಾವಣಗೆರೆ, ಮಂಡ್ಯ, ಚಿಕ್ಕಬಳ್ಳಾಪುರ, ಗೌರಿಬಿದನೂರು ಮೊದಲಾದ ಕಡೆಗಳಿಂದಲೂ ಗ್ರಾಹಕರು ನಿವೇಶನಗಳ ಖರೀದಿಗೆ ಬಂದಿದ್ದರು. ಬೆಂಗಳೂರು ಸುತ್ತ ಮುತ್ತಲ ಪ್ರದೇಶದಲ್ಲಿ ಸ್ವಂತ ನೆಲೆ ಹೊಂದುವ ಕನಸು ಇವರದ್ದಾಗಿತ್ತು.
ಬೆಂಗಳೂರು ನಗರ ಮಾತ್ರವಲ್ಲ ಸುತ್ತ ಮುತ್ತಲ ಬಿಡದಿ, ಮೈಸೂರು ರಸ್ತೆ, ನೆಲಮಂಗಲಗಳ ಸುತ್ತಮುತ್ತಲ ಪ್ರದೇಶಗಳಲ್ಲೂ ಕೈಗೆಟಕುವ ದರಗಳಲ್ಲಿ ಸಾವಿರಾರು ನಿವೇಶನಗಳನ್ನು ಕೊಳ್ಳುವ ಅವಕಾಶ ಎಕ್ಸ್'ಪೋದಲ್ಲಿದೆ. ಬೆಂಗಳೂರು ಮೈಸೂರು ಷಟ್ಪಥ ರಸ್ತೆಗೆ ಹೊಂದಿಕೊಂಡಂತೆ ಇರುವ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷಗಳಲ್ಲೇ ತಲುಪಬಹುದಾದಂತಹ ಪ್ರದೇಶಗಳಲ್ಲೂ ಸಾಕಷ್ಟುನಿವೇಶನಗಳು ಅಭಿವೃದ್ಧಿ ಆಗುತ್ತಿದ್ದು ಇಲ್ಲೂ ಚದರಡಿಗೆ ಕೇವಲ .300 ರೊಳಗೆ ಖರೀದಿಗೆ ಲಭ್ಯವಿದೆ. ಆಸಕ್ತ ಖರೀದಿದಾರರನ್ನು ಉಚಿತವಾಗಿ ನಿವೇಶನ, ಅಪಾರ್ಟ್ಮೆಂಟ್ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಪ್ರತಿಷ್ಠಿತ ಬಿಲ್ಡರ್ ಮತ್ತು ಡೆವಲಪರ್ ಕಂಪನಿಗಳು ಎಕ್ಸ್'ಪೋದಲ್ಲಿದ್ದು ಸಂಬಂಧಿಸಿದ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ, ದಾಖಲೆಗಳೊಂದಿಗೆ ಗ್ರಾಹಕರು ಎಲ್ಲೂ ಮೋಸ ಹೋಗದಂತೆ ಖಾತರಿಪಡಿಸುತ್ತಿದ್ದಾರೆ. ಆಸ್ತಾ ಪ್ರಾಪರ್ಟಿಸ್, ರೇಯಾನ್ ಬಿಲ್ಡರ್ಸ್, ಎಕೆ ಮ್ಯಾಕ್ಸ್, ಶಿವ ಡೆವಲಪರ್ಸ್ , ಡಿ.ಎಸ್. ಮ್ಯಾಕ್ಸ್, ಸ್ಪಟಿಕ ಡೆವಲಪರ್ಸ್, ಅಶೀರ್ವಾದ ಡೆವಲಪರ್ಸ್ ಹೀಗೆ 50ಕ್ಕೂ ಹೆಚ್ಚು ಸಂಸ್ಥೆಗಳು ಎಕ್ಸ್'ಪೋದಲ್ಲಿ ಭಾಗವಹಿಸಿವೆ.
ಆಸ್ತಾ ಪ್ರಾಪರ್ಟಿಸ್ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷದಲ್ಲಿ ಮನೆ ಸೇರಬಲ್ಲಂತಹ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, ಬೆಂಗಳೂರಿನ ದೊಡ್ಡ ಆಲದಮರ, ನೆಲಮಂಗಲದಲ್ಲೂ ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಎಲ್ಲವೂ ಕೈಗೆಟುಕುವ ದರದಲ್ಲಿದೆ. ರೇಯಾನ್ ಪ್ರಾಪರ್ಟಿಸ್ ಬೆಂಗಳೂರು-ಮೈಸೂರು ಯೋಜಿತ ಷಟ್ಪತದ ಸಮೀಪದಲ್ಲೇ ನಿವೇಶನಗಳ ಮಾರಾಟಕ್ಕೆ ಸಜ್ಜಾಗಿದೆ. ಮೊದಲ 100 ನಿವೇಶನ ಖರೀದಿದಾರರಲ್ಲೇ ಲಕ್ಕಿ ಡ್ರಾ ಮಾಡಲಾಗುತ್ತಿದ್ದು ಕಾರೊಂದನ್ನು ಬಹುಮಾನವಾಗಿ ನೀಡಲಿದೆ ಎಂದು ರೇಯಾನ್'ನ ಉಮಾಶಂಕರ್ ತಿಳಿಸಿದರು.
ಎಕೆ ಮ್ಯಾಕ್ಸ್ ಸಂಸ್ಥೆಯು ತಾವರೆಕೆರೆ, ತುಮಕೂರು ರಸ್ತೆ, ಹೇಸರಘಟ್ಟ ಮೊದಲಾದೆಡೆ ಯೋಜನೆಗಳನ್ನು ನಡೆಸುತ್ತಿದ್ದು ಮೊದಲ 30 ಗ್ರಾಹಕರಿಗೆ 5್ರಗ್ರಾಂ ಚಿನ್ನ ನೀಡುವುದಾಗಿ ಘೋಷಿಸಿದೆ. ಹೀಗೆ ಹತ್ತಾರು ಡೆವಲಪರ್'ಗಳು ಆಕರ್ಷಕ ಕೊಡುಗೆಗಳು, ಸ್ಪರ್ಧಾತ್ಮಕ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.
ವಸತಿ-ನಿವೇಶನದಿಂದ ಆತ್ಮ ವಿಶ್ವಾಸ: ಕೃಷ್ಣಪ್ಪ
ನಿವೇಶನ, ಮನೆ ಇವೆಲ್ಲವೂ ಜನರಲ್ಲಿ ಇನ್ನಷ್ಟುಆತ್ಮ ವಿಶ್ವಾಸ ತುಂಬುತ್ತದೆ. ಎಲ್ಲಾ ವರ್ಗದ ಜನರಿಗೂ ನಿವೇಶನ ಮತ್ತು ಮನೆ ದೊರೆಯುವಂತಾಗಬೇಕಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಹೇಳಿದರು. ಬಹುಭಾಷಾ ನಟಿ ಮೇಘನಾರಾಜ್ರೊಂದಿಗೆ ಎಕ್ಸ್ ಪೋ ಉದ್ಘಾಟಿಸಿದ ಸಚಿವರು, ಪ್ರಾಪರ್ಟಿ ಎಕ್ಸ್'ಪೋ ಒಂದೇ ಸೂರಿನಡಿಯಲ್ಲಿ ಎಲ್ಲ ವರ್ಗದ ಜನರ ಅಗತ್ಯತೆಗಳಿಗೆ ತಕ್ಕ ನಿವೇಶನ-ಮನೆಗಳನ್ನು ಆಯ್ಕೆ ಮಾಡುವ ಅವಕಾಶ ಕೊಟ್ಟಿದೆ. ಸ್ಪರ್ಧಾತ್ಮಕ ದರದಲ್ಲಿ ಎಲ್ಲರಿಗೂ ನಿವೇಶನ, ವಸತಿ ಈ ಎಕ್ಸ್'ಪೋದ ಮೂಲಕ ಲಭಿಸುವಂತಾಗಲಿ ಎಂದರು.
ನಟಿ ಮೇಘನಾರಾಜ್ ಮಾತನಾಡಿ, ಮಾಧ್ಯಮವು ಇಂತಹ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ನಗರದ ಹೊರಭಾಗದಲ್ಲೂ ನಿವೇಶನಗಳ ಆಯ್ಕೆಗೆ ವಿಪುಲ ಅವಕಾಶಗಳು ಈ ಎಕ್ಸ್ಪೋನಲ್ಲಿ ಲಭ್ಯವಾಗುತ್ತಿದೆ. ಈ ಎಕ್ಸ್ಪೋ ಎಲ್ಲರಿಗೂ ಸಹಾಯಕವಾಗಲಿದೆ ಎಂದ ಅವರು, ನನ್ನದೇ ಆದ ಮನೆಯೊಂದನ್ನು ಕಟ್ಟುವ ಆಸೆ ಇದೆ. ಎಲ್ಲಿ ನೆಲೆ ನಿಲ್ಲುತ್ತೇವೋ ಅದೇ ನಮ್ಮನೆ ಎಂದು ಹೇಳಿದರು.
ಕೆನರಾ ಬ್ಯಾಂಕ್'ನ ಜನರಲ್ ಮ್ಯಾನೇಜರ್ ಎಂ.ಎಂ.ಚಿನಿವಾರ್, ಎಕ್ಸ್'ಪೋದಲ್ಲಿ ಸ್ಥಳದಲ್ಲೇ ಸಾಲ ನೀಡುವ ವ್ಯವಸ್ಥೆ ಕುರಿತು ವಿವರಿಸಿ ಇದೀಗ ಬಡ್ಡಿ ದರ ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಆಗಿರುವುದು ಮಹಿಳೆಯರ ಹೆಸರಿನಲ್ಲಿ ಮಾಡಿದ ಸಾಲಕ್ಕೆ ಬಡ್ಡಿ ದರ ರಿಯಾಯ್ತಿ ಮೊದಲಾದ ಆಕರ್ಷಕ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನ ಸಿಇಒ ಕೌಶಿಕ್ ಘೋಷ್, ‘ಕನ್ನಡಪ್ರಭ' ಪ್ರಧಾನ ಸಂಪಾದಕ ರವಿ ಹೆಗಡೆ ಮೊದಲಾದವರಿದ್ದರು.
ಶುಕ್ರವಾರದ ಲಕ್ಕಿ ಡ್ರಾ ವಿಜೇತರು:
ಮೂರು ದಿನಗಳ ಪ್ರಾಪರ್ಟಿ ಎಕ್ಸ್ಪೋದಲ್ಲಿ ಭಾಗವಹಿಸಿ ನೋಂದಣಿ ಮಾಡುವ ಗ್ರಾಹಕರಲ್ಲಿ ಪ್ರತಿದಿನವೂ ಹತ್ತು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಇವರಿಗೆ ತಲಾ .10,000 ಬಹುಮಾನ ನೀಡಲಾಗುತ್ತಿದೆ. ಅಂತಿಮ ದಿನ 30/40 ಅಳತೆಯ ನಿವೇಶನದ ಬಂಪರ್ ಬಹುಮಾನದ ಅದೃಷ್ಟಶಾಲಿಗಳ ಆಯ್ಕೆ ನಡೆಯಲಿದೆ. ಬಹುಮಾನಿತರು ಶನಿವಾರ ಎಕ್ಸ್ಪೋದಲ್ಲಿ ತಮ್ಮ ಗುರುತಿನ ಪ್ರಮಾಣಪತ್ರ(ಫೋಟೋ ಐಡಿ) ನೀಡಿ ಬಹುಮಾನ ಸ್ವೀಕರಿಸಬಹುದಾಗಿದೆ.
ಹೆಸರು ಮತ್ತು ಮೊಬೈಲ್ ಸಂಖ್ಯೆ
ಗಂಗಾಧರ್ ......2016
ಸುಚಿತ್ರ ......8499
ಕೆ.ಶಿವರುದ್ರಣ್ಣ ......8421
ಹರೀಶ್ ......5585
ಚಿತ್ರಾ ......5364
ಸಯ್ಯದ್ ಹಸನ್ ......5882
ತನುಜಾ ......5206
ಲೋಕೇಶ್ ......0624
ಎಂ.ಸೆಲ್ವಿ ......1770
ಕೀರ್ತನ್'ಕುಮಾರ್ ......9979
ಎಚ್ಎಸ್ಆರ್ ಬಡಾವಣೆಯಲ್ಲಿ ನಮ್ಮ ಮನೆ ಇದೆ. ಗೌರಿಬಿದನೂರಿನಲ್ಲಿ ವೈದ್ಯರಾಗಿರುವ ಮಗಳು ಮತ್ತು ಅಳಿಯನಿಗಾಗಿ ಹತ್ತಿರದಲ್ಲೇ ನಿವೇಶನ ಕೊಳ್ಳಬೇಕೆಂದಿದ್ದೇನೆ. ಎಕ್ಸ್ಪೋ ನಮಗೆ ನೂರಾರು ಆಯ್ಕೆಗಳನ್ನು ತೆರೆದಿಟ್ಟಿದೆ.
- ಆಸಿಫುಲ್ಲಾ, ಎಚ್ಎಸ್ಆರ್ ಬಡಾವಣೆ, ಬೆಂಗಳೂರು
ಮುಂದೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಬೆಂಗಳೂರು ಸುತ್ತಮುತ್ತಲಿನಲ್ಲಿ ಎಲ್ಲಾದರೂ ಸರಿ ನಿವೇಶನ ಕೊಳ್ಳುವ ನಿರ್ಧಾರ ಮಾಡಿದ್ದೇನೆ. ಕುರುಬರಹಳ್ಳಿ, ದೊಡ್ಡ ಆಲದಮರ, ನೆಲಮಂಗಲ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು ಎಕ್ಸ್ಪೋದಲ್ಲಿ ಸೂಕ್ತ ಆಯ್ಕೆಗೆ ಸಾಕಷ್ಟುಅವಕಾಶಗಳಿವೆ. ಇದಕ್ಕಾಗಿಯೇ ದಾವಣಗೆರೆಯಿಂದ ಎಕ್ಸ್ಪೋ ನೋಡಲು ಬಂದಿದ್ದೇನೆ.
- ಕೆ.ಆರ್.ಮಮತಾ, ಚನ್ನಗಿರಿ, ದಾವಣಗೆರೆ
(epaper.kannadaprabha.in)
