ಅಸ್ತಾ ಪ್ರಾಪರ್ಟಿ ಸಹಯೋಗದಲ್ಲಿ ನಡೆಯುತ್ತಿರುವ ಸುವರ್ಣನ್ಯೂಸ್ ನ ಬಹುನಿರೀಕ್ಷಿತ ಪ್ರಾಪರ್ಟಿ ಎಕ್ಸ್ ಪೋ'ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಇವತ್ತು ಮತ್ತೆ ನಾಳೆಯೂ ಪ್ರಾಪರ್ಟಿ ಎಕ್ಸ್ ಪೋ ನಡೆಯಲಿದ್ದು ನಗರದ ಮೂಲೆ ಮೂಲೆಯಿಂದ ಗ್ರಾಹಕರು ಆಗಮಿಸಲಿದ್ದಾರೆ. ಅಲ್ಲದೇ ನಿನ್ನೆ ನಡೆದ ಲಕ್ಕಿ ಡಿಪ್ ನ ವಿಜೇತರಿಗೆ ಇವತ್ತು ಬಹುಮಾನ ವಿತರಿಸಲಾಗುತ್ತದೆ.
ಬೆಂಗಳೂರು(ಮಾ.04): ಅಸ್ತಾ ಪ್ರಾಪರ್ಟಿ ಸಹಯೋಗದಲ್ಲಿ ನಡೆಯುತ್ತಿರುವ ಸುವರ್ಣನ್ಯೂಸ್ ನ ಬಹುನಿರೀಕ್ಷಿತ ಪ್ರಾಪರ್ಟಿ ಎಕ್ಸ್ ಪೋ'ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಇವತ್ತು ಮತ್ತೆ ನಾಳೆಯೂ ಪ್ರಾಪರ್ಟಿ ಎಕ್ಸ್ ಪೋ ನಡೆಯಲಿದ್ದು ನಗರದ ಮೂಲೆ ಮೂಲೆಯಿಂದ ಗ್ರಾಹಕರು ಆಗಮಿಸಲಿದ್ದಾರೆ. ಅಲ್ಲದೇ ನಿನ್ನೆ ನಡೆದ ಲಕ್ಕಿ ಡಿಪ್ ನ ವಿಜೇತರಿಗೆ ಇವತ್ತು ಬಹುಮಾನ ವಿತರಿಸಲಾಗುತ್ತದೆ.
ಅಸ್ತಾ ಪ್ರಾಪರ್ಟಿ ಸಹಯೋಗದ ಸುವರ್ಣ ನ್ಯೂಸ್ ನಮ್ಮ ಮನೆ ಪ್ರಾಪರ್ಟಿ ಎಕ್ಸ್ ಪೋಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರಿನಲ್ಲಿ ಅತಿದೊಡ್ಡ ಪ್ರಾಪರ್ಟಿ ಶೋ ಉದ್ಘಾಟನೆ ಆಗಿತ್ತು.. ಇವತ್ತು ಮತ್ತು ನಾಳೆಯೂ ಪ್ರಾಪರ್ಟಿ ಎಕ್ಸ್ ಪೋ ನಡೆಯಲಿದ್ದು ನಗರದ ಮೂಲೆ ಮೂಲೆಯಿಂದ ಜನ್ರು ಆಗಮಿಸುವ ನಿರೀಕ್ಷೆಯಿದೆ.
ಇನ್ನು ನಿನ್ನೆ ಸಂಜೆ ಮೇಲೆ ಸಾಕಷ್ಟು ಮಂದಿ ಗ್ರಾಹಕರು ಪ್ರಾಪರ್ಟಿ ಎಕ್ಸ್ ಪೋಗೆ ಆಗಮಿಸಿದ್ದು, ಈ ವೇಳೆ ಸುವರ್ಣನ್ಯೂಸ್ ಅಡಿಯಲ್ಲಿ ಈ ಎಕ್ಸ್ ಪೋ ನಡೆಯುತ್ತಿರುವುದರಿಂದ ನಮ್ಮ ಹಣಕ್ಕೆ ಯಾವುದೇ ಮೋಸ ಆಗಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ವೇಳೆಗೆ ಎಕ್ಸ್ ಪೋದಲ್ಲಿ ನಡೆದ ಲಕ್ಕಿ ಡಿಪ್'ನ್ನು ಡ್ರಾ ಮಾಡಲಾಗಿದೆ. ಎಕ್ಸ್ ಪೋದಲ್ಲಿ ಭಾಗವಹಿಸಿದ್ದ ಕೆಲ ಬಿಲ್ಡರ್ಸ್ ಗಳು ಲಕ್ಕಿ ಡಿಪ್ ಅನ್ನು ಡ್ರಾ ಮಾಡಿದರು. ಈ ವೇಳೆ 10 ಮಂದಿ ಅದೃಷ್ಟಶಾಲಿಗಳ ಹೆಸರನ್ನೂ ಹೇಳಲಾಗಿದೆ. ಚಿತ್ರಾ.ಆರ್, ಸೈಯದ್ ಹಸನ್, ಹರೀಶ್, ಶಿವರುದ್ರಣ್ಣ, ಕೀರ್ತನ ಕುಮಾರ್, ಸುಚಿತ್ರಾ, ಸೆಲ್ವಿ, ಗಂಗಾಧರ್, ಲೋಕೇಶ್, ತನುಜಾ ಎಂಬ ಅದೃಶ್ಟಶಾಲಿಗಳು ಬಹುಮಾನ ದೊರೆತಿದೆ. ಇವತ್ತು ಅವರೆಲ್ಲಾ ಬಹುಮಾನವನ್ನು ವಿತರಣೆ ಮಾಡಲಾಗುವುದು.
ಒಟ್ಟಿನಲ್ಲಿ ಇವತ್ತು ಮತ್ತು ನಾಳೆಯೂ ಸಹ ಪ್ರಾಪರ್ಟಿ ಎಕ್ಸ್ ಪೋ ನಡೆಯಲಿದ್ದು ನಗರದ ಮೂಲೇ ಮೂಲೆಯಿಂದ ಸಾಕಷ್ಟು ಗ್ರಾಹಕರು ಬರುವ ನಿರೀಕ್ಷೆಯಿದೆ.
