ಕಾಂಗ್ರೆಸ್ ಸಭೆಯಲ್ಲಿ  ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ನಡೆಸಿದ ಚುನಾವಣಾ ಸಮೀಕ್ಷೆ ಸದ್ದು ಮಾಡಿದೆ.

ಬೆಂಗಳೂರು (ಡಿ.07): ಕಾಂಗ್ರೆಸ್ ಸಭೆಯಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ನಡೆಸಿದ ಚುನಾವಣಾ ಸಮೀಕ್ಷೆ ಸದ್ದು ಮಾಡಿದೆ.

ಇಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್ ಆರ್ ಪಾಟೀಲ್ ಹಾಗೂ ಎಐಸಿಸಿ ಇತರೆ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭ ಚುನಾವಣಾ ಸಮೀಕ್ಷೆ ಚರ್ಚೆಯಾಗಿದೆ. ಸಮೀಕ್ಷೆ ಪ್ರಕಾರ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಕಳಪೆ ಎಂದು ಬಂದಿದ್ದರ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು, ಮುಂಬೈ, ಮಧ್ಯ ಕರ್ನಾಟಕದಲ್ಲೂ ಪಕ್ಷ ಬಲಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಮೀಕ್ಷೆಯನ್ನ ಲಘುವಾಗಿ ಪರಿಗಣಿಸಬೇಡಿ ಎಂದು ಕಾಂಗ್ರೆಸ್ ಅನ್ನು ಎಚ್ಚರಿಸಿದ್ದಾರೆ.

ಜೆಡಿಎಸ್, ಬಿಜೆಪಿ ಪ್ರಬಲವಾಗಿರುವ ಭಾಗದಲ್ಲಿ ಪಕ್ಷ ಬಲಪಡಿಸಲು ವೇಣುಗೋಪಾಲ್ ಸೂಚನೆ ನೀಡಿದ್ದು, ಈ ಸಮೀಕ್ಷೆ ನಮ್ಮ ತಪ್ಪುಗಳನ್ನ ಎತ್ತಿ ತೋರಿಸಿದೆ ಎಂದೇ ಭಾವಿಸಿ. ಗಂಭೀರವಾಗಿ ಪಕ್ಷ ಸಂಘಟಿಸುವಂತೆ ಸೂಚನೆ ನೀಡಿದ್ದಾರೆ. ಉತ್ಸುಕರಾಗಿಯೇ ವೇಣುಗೋಪಾಲ್ ಸುವರ್ಣ ನ್ಯೂಸ್-ಕನ್ನಡ ಪ್ರಭ ಸಮೀಕ್ಷೆಯ ವಿವರವನ್ನ ಪಡೆದಿದ್ದಾರೆ.