ಕಳೆದ ಜನವರಿ 22 ರಿಂದ 25 ರವರೆಗೆ ಕೊಪ್ಪಳ ತಾಲೂಕಿನ 100 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಪ್ರವಾಸಕ್ಕೆಂದು 3.13.952 ರೂಪಾಯಿ ಖರ್ಚು ಮಾಡಲಾಗಿತ್ತು. ಪ್ರವಾಸದ ವೇಳೆಯಲ್ಲಿ ದೇವಸ್ಥಾನಗಳಲ್ಲಿ ಊಟ ಮಾಡಿಸಿ ಹೊಟೇಲ್ ಬಿಲ್ ಹಚ್ಚಲಾಗಿತ್ತು.  ಈ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಜೂನ್ 27 ರಂದು ಇಡೀ ದಿನ ವಿಸ್ತ್ರುತವಾದ ವರದಿ ಪ್ರಸಾರ ಮಾಡಿತ್ತು.

ಬೆಂಗಳೂರು(ಜು.29): ಕರ್ನಾಟಕ ದರ್ಶನ ಪ್ರವಾಸದಲ್ಲಿ ನಡೆದಿರುವ ಅವ್ಯವಹಾರ ಸಾಬೀತಾಗಿದ್ದು ಕೊಪ್ಪಳ ತಾಲೂಕಿನ ಶಿಕ್ಷಣ ಸಂಯೋಜಕ, ಕರ್ನಾಟಕ ದರ್ಶನ ನೋಡಲ್ ಅಧಿಕಾರಿ ಎಸ್ ಬಿ ಕುರಿಯನ್ನು ಅಮಾನತು ಮಾಡಿ ಕೊಪ್ಪಳ ಡಿಡಿಪಿಐ ಶ್ಯಾಮ್ ಸುಂದರ್ ಆದೇಶ ಹೊರಡಿಸಿದ್ದಾರೆ.

ಕಳೆದ ಜನವರಿ 22 ರಿಂದ 25 ರವರೆಗೆ ಕೊಪ್ಪಳ ತಾಲೂಕಿನ 100 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಪ್ರವಾಸಕ್ಕೆಂದು 3.13.952 ರೂಪಾಯಿ ಖರ್ಚು ಮಾಡಲಾಗಿತ್ತು. ಪ್ರವಾಸದ ವೇಳೆಯಲ್ಲಿ ದೇವಸ್ಥಾನಗಳಲ್ಲಿ ಊಟ ಮಾಡಿಸಿ ಹೊಟೇಲ್ ಬಿಲ್ ಹಚ್ಚಲಾಗಿತ್ತು. ಈ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಜೂನ್ 27 ರಂದು ಇಡೀ ದಿನ ವಿಸ್ತ್ರುತವಾದ ವರದಿ ಪ್ರಸಾರ ಮಾಡಿತ್ತು.

 ವರದಿ ಬಳಿಕ ಡಿಡಿಪಿಐ ಶ್ಯಾಮಸುಂದರ್ ಪ್ರಕರಣದ ತನಿಖೆಗೆ ಆದೇಶ ಮಾಡಿದ್ದರು. ಅದರಂತೆ ತನಿಖೆಯಲ್ಲಿ ಊಟದ ಬಿಲ್ ಗಳಲ್ಲಿ 55 ಸಾವಿರ ಹಣ ದೂರುಪಯೋಗವಾಗಿರುವುದು ಸಾಬೀತಾಗಿದ್ದು ಸಿಇಓ ವೆಂಕಟರಾಜು ನಿರ್ದೇಶನದ ಮೆರೆಗೆ ಡಿಡಿಪಿಐ ಶ್ಯಾಮ್ ಸುಂದರ್ ಎಸ್ ಬಿ ಕುರಿಯನ್ನು ಅಮಾನತು ಮಾಡಿದ್ದಾರೆ. ಇದು ಸುವರ್ಣನ್ಯೂಸ್ ವರದಿಯ ಫಲಶೃತಿ.