ಇನ್ನು 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿವಾಹ ನಡೆದಿರುವ ಮಾಹಿತಿಯೂ ತಿಳಿದುಬಂದಿದೆ. ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡ ನಂತರವೂ, ಪೋಷಕರು ಗುಪ್ತವಾಗಿ ಮದುವೆ ಮಾಡಿಸಿರುವ ಹಲವಾರು ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಕಲಬುರಗಿ (ನ.30): ಕಲಬುರಗಿಯಲ್ಲಿ ಬಾಲ್ಯವಿವಾಹ ಹೆಚ್ಚುತ್ತಿರುವ ಬಗ್ಗೆ ಸುವರ್ಣನ್ಯೂಸ್​ ವರದಿ ಬೆನ್ನಲ್ಲೇ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜ್ಜರ್ ಸಮುದಾಯದ ಕರಾಳತೆ ಬಗ್ಗೆ ನಿನ್ನೆಯಷ್ಟೇ ಸುವರ್ಣನ್ಯೂಸ್​ FIR​ನಲ್ಲಿ ವರದಿ ಪ್ರಸಾರ ಮಾಡಿತ್ತು. ನಮ್ಮ ವರದಿ ಬೆನ್ನಲ್ಲೇ, ಕಲಬುರಗಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಇನ್ನು 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿವಾಹ ನಡೆದಿರುವ ಮಾಹಿತಿಯೂ ತಿಳಿದುಬಂದಿದೆ. ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡ ನಂತರವೂ, ಪೋಷಕರು ಗುಪ್ತವಾಗಿ ಮದುವೆ ಮಾಡಿಸಿರುವ ಹಲವಾರು ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಮುಚ್ಚಳಿಕೆ ಬರೆದುಕೊಟ್ಟ ನಂತರವೂ ಮದುವೆ ಮಾಡಿದ ನೂರಾರು ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಪುಟ್ಟ ಮಕ್ಕಳನ್ನು ಬಾಲ ಮಂದಿರಕ್ಕೆ ಕರೆ ತರಲಾಗುತ್ತಿದೆ. ಒಟ್ಟಾರೆ ಸುವರ್ಣನ್ಯೂಸ್​ ವರದಿ ಸಂಚಲನ ಸೃಷ್ಟಿಸಿದ್ದು, ವರದಿಗೆ ಪ್ರತಿಫಲ ಸಿಕ್ಕಂತಾಗಿದೆ.