ಕೊಡಗು[ಜೂ.07]: ಕಳೆದ ವರ್ಷವಷ್ಟೇ ಸುರಿದಿದ್ದ ಭಾರೀ ಮಳೆಯಿಂದ ಪ್ರವಾಹಕ್ಕೀಡಗಿದ್ದ ಕೊಡಗು ಹಲವಾರು ಸಮಸ್ಯೆಗಳನ್ನೆದುರಿಸಿತ್ತು. ನೀರಿನ ರಭಸಕ್ಕೆ ಭೂಕುಸಿತ ಸಂಭವಿಸಿದ್ದು, ಕಟ್ಟಡಗಳೂ ಕೊಚ್ಚಿ ಹೋಗಿದ್ದವು. ಬಹುತೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬಳಿಕ ನಡೆದ ಅಧ್ಯಯನಗಳಲ್ಲಿ ಕೊಡಗಿನಲ್ಲಿ ಮರಗಳ ನಾಶ, ರೆಸಾರ್ಟ್ ನಿರ್ಮಾಣದಿಂದಾಗಿ ಈ ಪರಿಸ್ಥಿತಿ ಎದುರಾಗಿತ್ತೆಂಬ ಅಂಶ ಬಯಲಾಗಿತ್ತು. ಈ ಭೀಕರ ಘಟನೆ ನಡೆದು ಇನ್ನೂ ಒಂದು ವರ್ಷ ಕಳೆದಿಲ್ಲ, ಅಷ್ಟರಲ್ಲಾಗಲೇ ಕೊಡಗು ಜಿಲ್ಲಾಡಳಿತ ಇಂತಹ ದುರಂತಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವ ಬದಲಾಗಿ ಇನ್ನಷ್ಟು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು.

"

ಹೌದು ಈ ದುರಂತದಿಂದ ಪಾಠ ಕಲಿಯದ ಕೊಡಗು ಜಿಲ್ಲಾಡಳಿತ ಇಲ್ಲಿನ 68 ಎಕರೆ ಪ್ರದೇಶವನ್ನು ಆಂಧ್ರ ಮೂಲದ ಉದ್ಯಮಿಗೆ ನೀಡಿತ್ತು. ಅತ್ತ ಅರಣ್ಯ ಇಲಾಖೆ 890 ಮರಗಳಿಗೆ ಕೊಡಲಿ ಹಾಕಲು ಅನುಮತಿ ನೀಡುವ ಮೂಲಕ ಮತ್ತೊಂದು ದುರಂತಕ್ಕೆ ಹಾದಿ ಮಾಡಿ ಕೊಡಲು ತಯಾರಾಗಿತ್ತು. 

"

ಈ ಕುರಿತಾಗಿ ಸುವರ್ಣ ನ್ಯೂಸ್ ವರದಿ ಮಾಡಿದ್ದು, ಮರಗಳ ಮಾರಣಹೋಮ ತಡೆಯಲು ಯತ್ನಿಸಿತ್ತು. ಈ ಪ್ರಯತ್ನಕ್ಕೆ ಫಲ ಲಭಿಸಿದ್ದು, ಮರಗಳ ನಾಶಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ. 890 ಮರಗಳನ್ನು ಕಡಿಯುವ ಆದೇಶವನ್ನು ಹಿಂಪಡೆದಿದ್ದು, ಮರಗಳ ಮಾರಣ ಹೋಮವನ್ನು ಕೂಡಲೇ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಖಡಕ್ ಆದೇಶ ನೀಡಿದ್ದಾರೆ.