ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್ ಮಾಡಿ ಹಿಡಿದು ದಾವಣಗೆರೆಯ ರೇಷನ್ ಮಾಫಿಯಾದ ಕಿಂಗ್ಪಿನ್ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು.
ಬಡವರ ಅನ್ನದ ಬಟ್ಟಲು ಸೇರಬೇಕಾದ ಅನ್ನಭಾಗ್ಯದ ಸೌಭಾಗ್ಯವನ್ನ ರೇಷನ್ ಅಂಗಡಿಯಿಂದಲೇ ಕದ್ದು ಮಾರುತ್ತಿದ್ದ ಭ್ರಷ್ಟರ ಬಣ್ಣ ಬಯಲು ಮಾಡಿತ್ತು ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ. ಈ ಕಾರ್ಯಾಚರಣೆಗೆ ಕೈಜೋಡಿಸಿರೋ ಆಹಾರ ಇಲಾಖೆ ಅನ್ನಕ್ಕೆ ಕನ್ನ ಹಾಕುತ್ತಿದ್ದವರಿಗೆ ಭರ್ಜರಿ ಗುನ್ನ ಕೊಟ್ಟಿದೆ.
ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್ ಮಾಡಿ ಹಿಡಿದು ದಾವಣಗೆರೆಯ ರೇಷನ್ ಮಾಫಿಯಾದ ಕಿಂಗ್ಪಿನ್ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು. ಜೊತೆಗೆ ಈ ಖದೀಮರಿಗೆ ಸಾಥ್ ಕೊಟ್ಟು ಅವರ ದಂಧೆಗೆ ಸಹಕರಿಸುತ್ತಿದ್ದ, ದಾವಣಗೆರೆ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರ ಅಕ್ಕಿ ಮಿಲ್ ಶಂಕರ್ ರೈಸ್ ಮಿಲ್ನ ಕರಾಳ ಮುಖವನ್ನು ಕಳಚಿತ್ತು.
ಕವರ್ಸ್ಟೋರಿ ಕಾರ್ಯಾಚರಣೆಗೆ ಆಹಾರ ಇಲಾಖೆ ಅಧಿಕಾರಿಗಳು ಸಾಥ್ ನೀಡಿ ದಾವಣಗೆರೆ ಹರಿಹರ ಮಧ್ಯೆ ಇರೋ ಉಮಾಪತಿಯ ಗೋಡೌನ್ ಮೇಲೆ ದಾಳಿ ಮಾಡಿ, ಅಲ್ಲಿನ ಆಹಾರ ಇಲಾಖೆಯ ಚೀಲದ ಜೊತೆ ತುಂಬಿಸಿಟ್ಟಿದ್ದ 115 ಅಕ್ಕಿ ಹಾಗೂ 4 ಕ್ವಿಂಟಾಲ್ ರಾಗಿ ವಶ ಪಡಿಸಿಕೊಂಡು ಗೋಡೌನ್ ಮಾಲೀಕ ಉಮಾಪತಿ ಮೇಲೆ ಕೇಸ್ ದಾಖಲಿಸಿದ್ದಾರೆ.
ಸುವರ್ಣ ನ್ಯೂಸ್ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ ಆಹಾರ ಸಚಿವ ಯು.ಟಿ ಖಾದರ್ ರೇಷನ್ ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿರೋ ಇನ್ನಷ್ಟು ರೇಷನ್ ಕಳ್ಳರ ಮಾಫಿಯಾಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಬೇಕು.
ವರದಿ: ವರದ್ರಾಜ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
