ಇಲ್ಲಿನ ಏಳನೇ ತರಗತಿ ಮಕ್ಕಳಿಗೂ ಅಕ್ಷರ ಜ್ಞಾನವಿಲ್ಲ ಅನ್ನೋದನ್ನ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ವರದಿ ಮೂಲಕ ಬಿಚ್ಚಿಟ್ಟಿತ್ತು.
ಸಮಾಜ ಕಲ್ಯಾಣ ಇಲಾಖೆ ಗಿರಿಜನ ಹಾಗೂ ಆದಿವಾಸಿ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಿರೋ ಆಶ್ರಮ ಶಾಲೆಗಳು ಅಕ್ಷರಶ: ಅನಾಥ ಶಾಲೆಗಳಾಗಿವೆ. ಅಲ್ಲಿ ಶಿಕ್ಷಣ ಮರೀಚಿಕೆಯಾಗಿದ್ದು, ಅವು ಗಿರಿಜನರ ಮಕ್ಕಳ ಗಂಜೀಕೇಂದ್ರವಾಗಿವೆ. ಇಲ್ಲಿನ ಏಳನೇ ತರಗತಿ ಮಕ್ಕಳಿಗೂ ಅಕ್ಷರ ಜ್ಞಾನವಿಲ್ಲ ಅನ್ನೋದನ್ನ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ವರದಿ ಮೂಲಕ ಬಿಚ್ಚಿಟ್ಟಿತ್ತು.
ಈ ವರದಿ ಪ್ರಸಾರ ಬಳಿಕ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವ್ಯವಸ್ಥೆಯನ್ನ ಸರಿಪಡಿಸೋ ಭರವಸೆ ನೀಡಿದರು. ಅದರಂತೆ ಇಲಾಖೆಯ ಉಪಕಾರ್ಯದರ್ಶಿ ಶಂಭುಲಿಂಗ ಅವರು ಜಿಲ್ಲಾಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಪರಿಶಿಷ್ಟ ಪಂಗಡಗಳ ನಿರ್ದೇಶಕರನ್ನ ಈ ಅವ್ಯವಸ್ಥೆಗೆ ಜವಾಬ್ದಾರರನ್ನಾಗಿಸಿ, ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಆದೇಶಿಸಿದ್ದಾರೆ. ತಪ್ಪಿದ್ದಲ್ಲಿ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
