ಗದಗ(ಅ.23): ಈಗ ರಾಜ್ಯದೆಲ್ಲೆಡೆ ಬರೀ ಒತ್ತುವರಿ ತೆರವು, ಅತಿಕ್ರಮಣದ್ದೇ ಮಾತು. ಅದರಲ್ಲೂ ಶ್ರೀಮಂತರೇ ಅತಿಕ್ರಮಣದಂತಹ ಚಿಲ್ಲರೇ ಕೆಲಸ ಮಾಡುತ್ತಿರುವುದು ಈಗಾಗಲೇ ಸಾಬೀತಾಗಿದೆ. ಇದೇ ಹಾದಿಯಲ್ಲಿ ಗದಗ ನಗರದಲ್ಲಿರುವ ಐಶಾರಾಮಿ ಕ್ಲಾರ್ಕ್ಸ್ ಇನ್  ಹೋಟೆಲ್ ಕೂಡಾ ಸರ್ಕಾರಿ ಜಾಗ ಅತಿಕ್ರಮಣ ಮಾಡಿದ್ದು ಸಾಬೀತಾಗಿದೆ. ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಪ್ರತಿಷ್ಠಿತ ಹೋಟೆಲ್​ನಿಂದ ರಸ್ತೆ ಅತಿಕ್ರಮಣ ಸಾಬೀತು

ಗದಗ ಜಿಲ್ಲೆಯ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಹೋಟೆಲ್. ಕೇಶವ ಕ್ಲಾರ್ಕ್ಸ್ ಇನ್ ಹೋಟೆಲ್.  ಈ ಹೋಟೆಲ್  3,800 ಚದರಡಿ ರಸ್ತೆ ಅತಿಕ್ರಮಿಸಿದೆ ಎನ್ನುವ ಆರೋಪ ಕೇಳಿ ಬಂದಿತ್ತು.. ಸುವರ್ನ ನ್ಯೂಸ್ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಇದಾದ ಬಳಿಕ ಹೋಟೆಲ್ ಆಡಳಿತ ಮಂಡಳಿಗೆ ಗದಗಬೆಟಗೇರಿ ನಗರಸಭೆ ಅತಿಕ್ರಮಣದ ಕುರಿತು ಕಾರಣ ಕೇಳಿ ನೋಟಿಸ್ ನೀಡಿತ್ತು. ಆದರೆ ನೋಟಿಸ್​'ಗೆ ಕ್ಲಾರ್ಕ್ಸ್ ಇನ್ ಹೋಟೆಲ್  ಕ್ಯಾರೇ ಎನ್ನಲಿಲ್ಲ. ಹಾಗಂತ ಅಧಿಕಾರಿಗಳು ಸುಮ್ಮನೆ ಕೂರದೇ ಸರ್ವೇ ನಡೆಸಿದ್ರು.. ಈ ಮೂಲಕ ಹೋಟೆಲ್ ಬರೋಬ್ಬರಿ 1 ಕೋಟಿ 14 ಲಕ್ಷ ಮೌಲ್ಯದ 3,800 ಚದರಡಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿದ್ದು ಸಾಬೀತಾಗಿದೆ.

ಅತಿಕ್ರಮಣ ಸಾಬೀತಾಗಿದೆ, ದಾಖಲೆಗಳಿವೆ. ಆದರೂ ದೊಡ್ಡವರ ಆಸ್ತಿ ತೆರವಿಗೆ ನಗರಸಭೆ ಹಿಂದೆ ಮುಂದೆ ನೋಡ್ತಿದೆ ಅನ್ನೋದು ಇವರ ಆರೋಪ. ಈ ಮಧ್ಯೆ ಒತ್ತುವರಿ ತೆರವು ಮಾಡದಂತೆ ನಗರಸಭೆ ಕಮಿಷನರ್ ಅವ್ರಿಗೆ ಕೆಲ ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕಮಿಷನರ್ ಮಾತ್ರ ಅಂಥದ್ದೇನಿಲ್ಲ ತೆರವು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಸುವರ್ಣ ನ್ಯೂಸ್ ವರದಿಯಿಂದ ಅಧಿಕಾರಿಗಳು ಎಚ್ಚೆತ್ತು ಐಶಾರಾಮಿ ಹೋಟೆಲ್​'ನ ಒತ್ತುವರಿ ಸಾಬೀತುಪಡಿಸಿದ್ದಾರೆ. ಆದಷ್ಟು ಬೇಗ ಸರ್ಕಾರದ ಜಮೀನು ವಶಕ್ಕೆ ಪಡೆಯೋ ಮೂಲಕ ದಿಟ್ಟತನ ತೋರಬೇಕಿದೆ.