ಕೆಲ ಪ್ರಭಾವಿ ರೈತರು, ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಕೋಟಿ ಕೋಟಿ ಪರಿಹಾರ ಲೂಟಿ ಹೊಡೆದಿದ್ದಾರೆ. ಅಲ್ಲದೆ ಹಾಲಿ ಅಪರ ಜಿಲ್ಲಾಧಿಕಾರಿ ಬೂದೆಪ್ಪ, ಎಸಿ ಪರಶುರಾಮ ಶಾಮೀಲಾಗಿರುವುದನ್ನು ವಾಹಿನಿ ದಾಖಲೆ ಸಮೇತ ಬಯಲು ಮಾಡಿತ್ತು.

ವಿಜಯಪುರ- ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿ 13ರ ಚತುಷ್ಪತ ಯೋಜನೆ ಹಗರಣದ ಕೂಪ ಆಗಿದ್ದು ಇದಕ್ಕೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರು ಬೆಂಬಲ ನೀಡಿರುವುದನ್ನು ಸುವರ್ಣ ನ್ಯೂಸ್​ ಕವರ್​ಸ್ಟೋರಿ ತಂಡ ಪತ್ತೆ ಹಚ್ಚಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

Add Asianetnews Kannada as a Preferred SourcegooglePreferred

ಕೆಲ ಪ್ರಭಾವಿ ರೈತರು, ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಕೋಟಿ ಕೋಟಿ ಪರಿಹಾರ ಲೂಟಿ ಹೊಡೆದಿದ್ದಾರೆ. ಅಲ್ಲದೆ ಹಾಲಿ ಅಪರ ಜಿಲ್ಲಾಧಿಕಾರಿ ಬೂದೆಪ್ಪ, ಎಸಿ ಪರಶುರಾಮ ಶಾಮೀಲಾಗಿರುವುದನ್ನು ವಾಹಿನಿ ದಾಖಲೆ ಸಮೇತ ಬಯಲು ಮಾಡಿತ್ತು.

ಈ ವರದಿ ಇಂಪ್ಯಾಕ್ಟ್ ಆಗಿದ್ದು, ವಿಜಯಪುರದ ನಮೋ ಬ್ರಿಗೇಡ್ ಮುಖಂಡ ರಾಘವ ಅಣ್ಣಿಗೇರಿ , ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ರಮೇಶ್ ಜಿಗಜಿಣಗಿ ವಿರುದ್ಧ ಆನ್ ಲೈನ್ ಮೂಲಕ ರಾಘವ, ಪ್ರಧಾನಿ ಮೋದಿಯ ಸಾರ್ವಜನಿಕ ಕುಂದುಕೊರತೆ ವಿಭಾಗದಕ್ಕೆ ದೂರು ದಾಖಲಿಸಿದ್ದಾರೆ. ಇದಕ್ಕೆ ತಕ್ಷಣವೇ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಸಮಗ್ರ ತನಿಖೆ ನಡೆಸುವುದಾಗಿ ಸ್ವೀಕೃತ ಪತ್ರ ಕಳುಹಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ನನ್ನದೇನೂ ತಪ್ಪಿಲ್ಲ. ಇದು ಷಡ್ಯಂತ್ರ ಅಂತಾ ಸಮಜಾಯಿಷಿ ನೀಡಿದ್ದಾರೆ. ಇನ್ನೂ ರಮೇಶ್ ಜಿಗಜಿಣಗಿಯನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಒತ್ತಾಯಿಸಿ ಟಿಪ್ಪು ಸೇನೆ ರೈತ ಘಟಕದ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದರು.

ಇನ್ನೂ ಈ ಬಗ್ಗೆ ಕ್ರಮಕೈಗೊಳ್ಳಬೇಕಾಗಿದ್ದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಕೂಡ ಅಕ್ರಮಕ್ಕೆ ಕೈಜೋಡಿಸಿರುವ ಆರೋಪ ಕೇಳಿಬಂದಿದೆ. ಒಟ್ಟಾರೆ ಎನ್'ಹೆಚ್13ರ ಚತುಷ್ಪತ ಯೋಜನೆಯಲ್ಲಿ ಭಾರೀ ಹಗರಣ ನಡೆದಿರೋದು ಸ್ಪಷ್ಟ. ಇದರ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.